HSRP ನಂಬರ್ ಇಲ್ಲದ ವಾಹನಗಳಿಗೆ ಸೆಪ್ಟೆಂಬರ್ 16 ರಿಂದ ಬೀಳಲಿದೆ ದಂಡ.!

HSRP

HSRP (High Security Number Plate) ನಂಬರ್ ಪ್ಲೇಟ್ ವಿಚಾರ ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವಾಗಿದೆ. ಎಲ್ಲ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಅಳವಡಿಸಲೇ ಬೇಕಾದ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇದಾಗಿದೆ. ಈ ಹೊಸ ವಿನ್ಯಾಸದ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದರಿಂದ ವಾಹನಗಳು ಕಳ್ಳತನವಾದಾಗ ಪತ್ತೆ ಹಚ್ಚುವುದು ಹಾಗೂ ಯಾವುದೇ ಕಾರಣಕ್ಕಾಗಿ ವಾಹನಗಳ ಬಗ್ಗೆ ನಿಖರವಾದ ಡಾಟಾವನ್ನು ಶೀಘ್ರವಾಗಿ ಪಡೆಯಲು ಸಾಧ್ಯವಾಗುತ್ತದೆ.

ಇದರಿಂದ ಅನೈತಿಕ ಚಟುವಟಿಕೆಗಳಿಗೆ ವಾಹನಗಳು ಬಳಕೆ ಆಗುವುದನ್ನು ತಡೆಗಟ್ಟಬಹುದು. ಇದರಲ್ಲಿ ವಾಹನ ಮಾಲೀಕರಿಗೆ ವಾಹನ ಭದ್ರತೆಯ‌ ವೈಯಕ್ತಿಕ ಅನುಕೂಲತೆ ಜೊತೆಗೆ ದೇಶದ ರಕ್ಷಣೆಯ ವಿಚಾರ ಕೂಡ ಸೇರಿದೆ. ಹೀಗಾಗಿ ಕೇಂದ್ರ ಸರ್ಕಾರವು ಏಪ್ರಿಲ್ 1, 2019 ಕ್ಕಿಂತ ಮೊದಲು ಖರೀದಿಸಿದ ಎಲ್ಲಾ ಬಗೆಯ ವಾಹನಗಳಿಗೂ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎನ್ನುವ ನಿಯಮವನ್ನು ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಈಗಾಗಲೇ ದೇಶದ ಹಲವು ರಾಜ್ಯಗಳು ಇದನ್ನು ಜಾರಿಗೆ ತಂದು ಸಂಪೂರ್ಣವಾಗಿ ಅಳವಡಿಸಿಕೊಂಡಿವೆ. ನಮ್ಮ ರಾಜ್ಯದಲ್ಲಿ ಕೂಡ ರಾಜ್ಯ ಸರ್ಕಾರ ಕಳೆದ ವರ್ಷ ಆಗಸ್ಟ್ 17ರಂದು ಕೇಂದ್ರ ಸರ್ಕಾರದ ನಿಯಮದಂತೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮ ಹೊರಡಿಸಿ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಲು ಮೂರು ತಿಂಗಳವರೆಗೆ ಕಾಲಾವಕಾಶ ನೀಡಿತ್ತು.

ಈ ಸುದ್ದಿ ಓದಿ:- Canara Bank: ಕೆನರಾ ಬ್ಯಾಂಕ್ ನ ಗ್ರಾಹಕರಿಗೆ ಸಿಹಿ ಸುದ್ದಿ.!

ಶೋರೂಮ್ ಗಳಲ್ಲಿ, ಡೀಲರ್ ಬಳಿ ಅಥವಾ ಆನ್ಲೈನಲ್ಲಿ ಸ್ವತಃ ಆರ್ಡರ್ ಮಾಡಿಕೊಂಡು ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಲು ಅವಕಾಶ ಇತ್ತು ಆದರೆ ರಾಜ್ಯದಲ್ಲಿ 2 ಕೋಟಿಗಿಂತ ಹೆಚ್ಚು ವಾಹನ ಇದ್ದಿದ್ದರಿಂದ ಸರ್ವರ್ ಸಮಸ್ಯೆ, ಮಾಹಿತಿ ಕೊರತೆ ಇತ್ಯಾದಿ ಕಾರಣಗಳಿಂದ ಮೂರು ತಿಂಗಳಲ್ಲಿ ಇದನ್ನು ಪೂರ್ತಿ ಮಟ್ಟದಲ್ಲಿ ಸಾಧಿಸಲಾಗದ ಕಾರಣ ಇದನ್ನು ಅರಿತ ಸರ್ಕಾರ ಈ ಕಾಲಾವಕಾಶವನ್ನು ಮತ್ತಷ್ಟು ದಿನಗಳವರೆಗೆ ವಿಸ್ತರಿಸಿತು.

ಇದರ ಪ್ರಕಾರವಾಗಿ ಆಗಸ್ಟ್ 17, 2023 ರಿಂದ 15 ಸೆಪ್ಟೆಂಬರ್, 2024ರವರೆಗೆ ನಾಲ್ಕೈದು ಬಾರಿ ಸರ್ಕಾರ ಮೂರು ತಿಂಗಳವರೆಗೆ ಈ ಕಾಲಾವಕಾಶ ವಿಸ್ತರಿಸಿ ಅವಕಾಶ ನೀಡುತ್ತಲೇ ಬಂದಿದೆ. ಆದರೆ ಕಳೆದ ಬಾರಿ ನೀಡಿದ ಅವಕಾಶವನ್ನು ಅಂತಿಮ ಎಂದು ಘೋಷಿಸಿ ಸೆಪ್ಟೆಂಬರ್ 15 ರ ನಂತರವೂ HSRP ನಂಬರ್ ಪ್ಲೇಟ್ ಇಲ್ಲದೆ ವಾಹನಗಳು ರಸ್ತೆಗಳಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಲಾಗಿತ್ತು.

ಈವರೆಗೂ ಬಂದ ಮಾಹಿತಿ ಪ್ರಕಾರವಾಗಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಚಾಲಕ ಹೊಂದಿರಬೇಕಾದ ಇತರೆ ದಾಖಲೆಗಳ ಜೊತೆಗೆ HSRP ನಂಬರ್ ಪ್ಲೇಟ್ ಅಳವಡಿಸಿರಬೇಕಾದದ್ದು ಅಷ್ಟೇ ಕಟುವಾದ ನಿಯಮ ಎನ್ನುವಂತೆ ಮನವರಿಕೆ ಮಾಡಿಕೊಡಲಾಗಿದೆ.

ಈ ಸುದ್ದಿ ಓದಿ:- Subsidy: ರೈತರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 2 ಲಕ್ಷ.!

ಈ ನಿಯಮ ಮೀರಿದಲ್ಲಿ ಸೆಪ್ಟೆಂಬರ್ 16ರಿಂದ HSRP ನಂಬರ್ ಪ್ಲೇಟ್ ಇಲ್ಲದೆ ಓಡಾಡುವ ವಾಹನಗಳಿಗೆ ಮೊದಲ ಬಾರಿಗೆ ದಂಡ ಹಾಗೂ ಪದೇ ಪದೇ ಇದು ಮುಂದುವರೆದಲ್ಲಿ ವಾಹನವನ್ನೇ ಜಪ್ತಿ ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಸಿದೆ.

ಹಾಗಾಗಿ ತಪ್ಪದೆ ಈ ಕೂಡಲೇ ನಿಮ್ಮ ಮನೆಯಲ್ಲಿರುವ ಏಪ್ರಿಲ್ 01, 2019ಕ್ಕೂ ಮುಂಚೆ ಖರೀದಿಸಿರುವ ಯಾವುದೇ ದ್ವಿಚಕ್ರ ಮೂರುಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ. ಆನಂತರ ತಯಾರಾಗಿರುವ ವಾಹನಗಳಲ್ಲಿ ಈಗಾಗಲೇ HSRP ನಂಬರ್ ಪ್ಲೇಟ್ ನ್ನು ಅಳವಡಿಸಿರುವುದರಿಂದ ಇದರ ಅಗತ್ಯತೆ ಇರುವುದಿಲ್ಲ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment