LPG ಸಿಲಿಂಡರ್‌ ಬಳಸುತ್ತಿರುವವರಿಗೆ ಸಿಕ್ಕಿತು ಮತ್ತೊಂದು ಸೌಲಭ್ಯ.!

LPG Gas

ಗ್ಯಾಸ್ ಸಿಲಿಂಡರ್ ಇಲ್ಲದ ಮನೆಯಲ್ಲಿ ಇಂದು ಇಲ್ಲ. ದೇಶದ ಪ್ರತಿ ಮನೆಗಳಲ್ಲಿ ಎಲ್​ಪಿಜಿ ಒಲೆ ಅಡುಗೆ ಸಿದ್ಧವಾಗುತ್ತಿದೆ. ಇದರ ಜೊತೆಗೆ ಸರ್ಕಾರ ಸಬ್ಸಿಡಿಯನ್ನು ಸಹ ನೀಡುತ್ತಿದೆ. ಎಲ್​ಪಿಜಿ ಸಿಲಿಂಡರ್ ಬೆಲೆ ನಗರದಿಂದ ನಗರಕ್ಕೆ ಬೇರೆಯಾಗಿರುತ್ತದೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಗ್ಯಾಸ್ ಬೆಲೆ ಹಂತ ಹಂತವಾಗಿ ಹೆಚ್ಚಳವಾಗುತ್ತಿದೆ. ಪಂಚ ರಾಜ್ಯ ಚುನಾವಣೆಗೂ ಮುನ್ನ ಕೇಂದ್ರ ಸಬ್ಸಿಡಿ ನೀಡಿತ್ತು.

ದೇಶದಲ್ಲಿ ಹೆಚ್ಚಿರುವ ಬೆಲೆ ಏರಿಕೆ ಬಿಸಿಯನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಉಜ್ವಲಾ ಯೋಜನೆಯಡಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ.ಗಳ ಹೆಚ್ಚುವರಿ ಸಬ್ಸಿಡಿಯನ್ನು ನೀಡಲು ತೀರ್ಮಾನಿಸಿದೆ. ಈಗಾಗಲೇ ಉಜ್ವಲ ಯೋಜನೆಯಡಿಯಲ್ಲಿ ಸಂಪರ್ಕ ಪಡೆದು ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬಳಸುತ್ತಿರುವವರು ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now

ಈ ಫಲಾನುಭವಿಗಳು ಇನ್ನು ಮುಂದೆ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ಒಟ್ಟು 400 ರೂ. ಸಬ್ಸಿಡಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೌದು, ಕೇಂದ್ರ ಸರ್ಕಾರ (Central government) ಜನರ ಹಿತ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಈ ಯೋಜನೆಗಳ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ ಪಿ ಜಿ ಸಿಲಿಂಡರ್ (LPG cylinder) ಬಳಕೆ ಮಾಡುವ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ.

LPG ಸಿಲೆಂಡರ್ ಬಳಕೆದಾರರಿಗೆ ಕೇಂದ್ರದಿಂದ ಸಿಗ್ತು ಗುಡ್ ನ್ಯೂಸ್

ಹಣದುಬ್ಬರದ ಸಮಯದಲ್ಲಿ ಎಲ್‍ಪಿಜಿ ಗೃಹ ಬಳಕೆಯ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೋ ಅಂತವರಿಗೆ 200 ರೂಪಾಯಿಗಳ ಸಬ್ಸಿಡಿ (subsidy ) ನೀಡುವುದರ ಮೂಲಕ ಸರ್ಕಾರ ದೊಡ್ಡ ಹೊರೆಯನ್ನು ಗ್ರಾಹಕರ ತಲೆಯಿಂದ ಇಳಿಸಿದೆ ಎಂದು ಹೇಳಬಹುದು. ಇದರ ಜೊತೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಬಡವರು ಕೇವಲ 605 ರೂ. ಗಳಿಗೆ ಸಿಲಿಂಡರ್ ಪಡೆದುಕೊಳ್ಳುವಂತೆ ಆಗಿದೆ. ಇದು ಗ್ರಾಹಕರಿಗೆ ಅನುಕೂಲವಾಗಲು ಮತ್ತೊಂದು ಸೌಲಭ್ಯವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ.

ಇದಕ್ಕೆ ಭಾರತ್ ಗ್ಯಾಸ್ ಸಿಲಿಂಡರ್ ಹೊಸ ಉಪಕ್ರಮವನ್ನು ಆರಂಭಿಸಿದೆ. ಎಲ್ ಪಿ ಜಿ ಸಿಲಿಂಡರ್ ಬಳಸುತ್ತಿರುವ ಪ್ರತಿಯೊಬ್ಬ ಗೃಹಿಣಿಯರಿಗೂ ಕೂಡ ಇದರಿಂದ ಸುರಕ್ಷತೆ ಸಿಗಲಿದೆ. ಪ್ರಸ್ತುತ ದೇಶದಲ್ಲಿ ಎಲ್‌ಪಿಜಿ ಗ್ರಾಹಕರ ಸಂಖ್ಯೆ ಸುಮಾರು 33 ಕೋಟಿಯಷ್ಟಿದೆ. 2025-26ರ ವೇಳೆಗೆ ಇನ್ನೂ 75 ಲಕ್ಷ ಎಲ್‌ಪಿಜಿ ಸಂಪರ್ಕಗಳು ಸೇರ್ಪಡೆಯಾಗಲಿವೆ ಎಂದು ಕಳೆದ ವರ್ಷ ಅಂದಾಜಿಸಲಾಗಿತ್ತು.

ಭಾರತ್ ಗ್ಯಾಸ್ ಸಿಲಿಂಡರ್ ಕಂಪನಿಯ ನ ಹೊಸ ಉಪಕ್ರಮ

ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಭಾರತ್ ಸಿಲೆಂಡರ್ ಇದೀಗ ಎಲ್‌ಪಿಜಿ ಸಿಲಿಂಡರ್ ಪಡೆಸುತ್ತಿರುವ ಗ್ರಾಹಕರಿಗೆ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿಕೊಡಲಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಪ್ಯೂರ್ ಫಾರ್ ಶ್ಯೂರ್ (pure for sure) ಫೆಸಿಲಿಟಿಯನ್ನು ಒದಗಿಸಿಕೊಡಲಿದೆ. ಎಲ್ಪಿಜಿ ಸಿಲಿಂಡರ್ ನ ಗುಣಮಟ್ಟ ಮತ್ತು ಸಿಲಿಂಡರ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಹಕರು ತಾವು ಬಳಕೆ ಮಾಡುತ್ತಿರುವ ಸಿಲಿಂಡರ್ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹಾಗೂ ಹೆಚ್ಚಿನ ಸುರಕ್ಷತೆಯು ಕೂಡ ಸಿಗುತ್ತದೆ.

ಪ್ಯೂರ್ ಫಾರ್ ಶ್ಯೂರ್ ಕಾರ್ಯಕ್ರಮಕ್ಕೆ ಜನ ಮನ್ನಣೆ!

ಇನ್ನು ಮುಂದೆ ಭಾರತ ಗ್ಯಾಸ್ ಪಡೆದುಕೊಳ್ಳುವ ಗ್ರಾಹಕರಿಗೆ ಸಿಲಿಂಡರ್ ಮೇಲೆ ಟಾಂಪಾರ್ ಫ್ರೂಫ್ ಸೀಲ್ ಹಾಕಲಾಗುತ್ತದೆ. ಇಲ್ಲಿ ಒಂದು ಕ್ಯೂಆರ್ ಕೋಡ್ (QR code) ಸ್ಕ್ಯಾನ್ ನೀಡಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಸಿಗ್ನೇಚರ್ ಟ್ಯೂನ್ ನೊಂದಿಗೆ pure for sure pop up ಆಗುತ್ತದೆ. ಇದರಿಂದ ಸಿಲಿಂಡರ್ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ನಿಂದ ಇಲ್ಲಿಯವರೆಗಿನ ಸಿಲಿಂಡರ್ ಗೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಎಲ್‌ಪಿಜಿ ದರ ಇಳಿಕೆಗೆ ಕಾರಣ ಏನು?

* ಮುಂಬರುವ ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗೆಲ್ಲುವುದು.
* ಬೆಲೆ ಏರಿಕೆಯು ಜನಾಕ್ರೋಶವಾಗಿ ಮಾರ್ಪಟ್ಟು ಮತ್ತೊಮ್ಮೆ ಕರ್ನಾಟಕದ ಮಾದರಿ ಮುಖಭಂಗ ತಪ್ಪಿಸುವುದು.

ʻಪ್ರಧಾನ ಮಂತ್ರಿ ಉಜ್ವಲಾ ಯೋಜನೆ 2024ʼಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ

* ಅರ್ಜಿದಾರರು ಮಹಿಳೆಯಾಗಿರಬೇಕು.
* ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
* ಅರ್ಜಿದಾರರು ತನ್ನ ಹೆಸರಿನಲ್ಲಿ ನೀಡಲಾದ ಯಾವುದೇ ಇತರ LPG ಸಂಪರ್ಕವನ್ನು ಹೊಂದಿರಬಾರದು.

* ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದ ವಯಸ್ಕ ಮಹಿಳೆಯರು – SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮಿನ್), ದ್ವೀಪಗಳು ಮತ್ತು ನದಿ ದ್ವೀಪಗಳಲ್ಲಿ ವಾಸಿಸುವ ಜನರು, SECC ಕುಟುಂಬಗಳ ಅಡಿಯಲ್ಲಿ (AHL TIN) ಅಥವಾ 14-ಪಾಯಿಂಟ್ ಘೋಷಣೆಯ ಪ್ರಕಾರ ಯಾವುದೇ ಬಡ ಕುಟುಂಬಕ್ಕೆ ಸೇರಿದ್ದಾರೆ, ಅತ್ಯಂತ ಹಿಂದುಳಿದ ವರ್ಗಗಳು (MBC) ಅಂತ್ಯೋದಯ ಅಣ್ಣಾ ಯೋಜನೆ (AAY), ಅರಣ್ಯವಾಸಿಗಳು, ಮತ್ತು ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳು.

ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆ

– ಆಧಾರ್ ಕಾರ್ಡ್
– ರಾಜ್ಯದಿಂದ ನೀಡಲಾದ ಪಡಿತರ ಚೀಟಿ
– ನಿಮ್ಮ ಗ್ರಾಹಕರ ಸ್ಥಿತಿಯನ್ನು ತಿಳಿಯಿರಿ
– ಗುರುತಿನ ಪುರಾವೆ (ಮತದಾರ ಐಡಿ)
– ಬ್ಯಾಂಕ್ ಖಾತೆಯ ಪಾಸ್‌ಬುಕ್
– ಸಕ್ರಿಯ ಮೊಬೈಲ್ ಸಂಖ್ಯೆ
– ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವು ಅತ್ಯಗತ್ಯವಾಗಿರುತ್ತದೆ.

PM UY 2024 ಗಾಗಿ ಅರ್ಜಿ ಪ್ರಕ್ರಿಯೆ

ಹಂತ 1: ಮೊದಲನೆಯದಾಗಿ, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ https://www.pmuy.gov.in/ ಗೆ ಭೇಟಿ ನೀಡಿ.
ಹಂತ 2: ಈಗ, ನಿಮ್ಮ scre e n ನಲ್ಲಿ ಹೊಸ ಪುಟವು ಗೋಚರಿಸುತ್ತದೆ , ಇಲ್ಲಿ ಕ್ಲಿಕ್ ಮಾಡಿ ಮತ್ತು ಹೊಸ ಉಜ್ವಲ 2.0 ಸಂಪರ್ಕಕ್ಕಾಗಿ ಅನ್ವಯಿಸಿ
ಹಂತ 3: ಈಗ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಆಧಾರ್ ಕಾರ್ಡ್ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ.
ಹಂತ 4: ಕೆಳಗೆ ಸ್ಕ್ರಾಲ್ ಮಾಡಿ ಮತ್ತು “OTP ಕಳುಹಿಸಿ” ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 5: ಈಗ, ನೀವು ಸಲ್ಲಿಸಿದ ಮೊಬೈಲ್ ಸಂಖ್ಯೆಗೆ ಒನ್-ಟೈಮ್ ಪಾಸ್‌ವರ್ಡ್ ಕಳುಹಿಸಲಾಗುತ್ತದೆ. ಇಂಟರ್ಫೇಸ್‌ನಲ್ಲಿ OTP ಅನ್ನು ಸಲ್ಲಿಸಿ.
ಹಂತ 6: ನಂತರ ನಿಮ್ಮ ಹೆಸರು, ವಿಳಾಸ, ಇತ್ಯಾದಿ ವಿವರಗಳನ್ನು ಭರ್ತಿ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
ಹಂತ 7: ಸಲ್ಲಿಸು ಬಟನ್ ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡುವ ಮೊದಲು ನಿಮ್ಮ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಖಚಿತಪಡಿಸಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment