Pension
ಪ್ರತಿಯೊಬ್ಬ ವ್ಯಕ್ತಿಗೂ ದುಡಿಮೆ ಎಷ್ಟು ಮುಖ್ಯವೋ ದುಡಿಯುವ ಸಮಯದಲ್ಲಿ ಮಾಡುವ ಉಳಿತಾಯ ಕೂಡ ಅಷ್ಟೇ ಪ್ರಮುಖವಾದ ಸಂಗತಿ. ನಾವು ಮಾಡುವ ಉಳಿತಾಯವು ಭವಿಷ್ಯದ ಉದ್ದೇಶದಿಂದ ಆಗಿರಬಹುದು, ಮುಂದೆ ಒಂದು ದಿನ ದುಡಿಯಲು ಶಕ್ತಿ ಇಲ್ಲದೆ ಇದ್ದಾಗ ಅನುಕೂಲವಾಗಲಿ ಎಂದು ಸರ್ಕಾರದ ಪಿಂಚಣಿ ಯೋಜನೆಗಳಲ್ಲಿ ಅಥವಾ ಖಾಸಗಿ ಇನ್ನಿತರ ಯೋಚನೆಗಳಲ್ಲಿ ಜನ ಹೂಡಿಕೆ ಮಾಡಿ ಹಣ ಉಳಿಸಿಕೊಳ್ಳುತ್ತಾರೆ.
ಆದರೆ ಇನ್ನೂ ಕೆಲವರು ದುಡಿಯುವ ಸಮಯದಲ್ಲಿ ಆ ಹಣವನ್ನು ಹೂಡಿಕೆಯಾಗಿ ಖರ್ಚು ಮಾಡಿ ಒಂದರ್ಥದಲ್ಲಿ ಹಣವನ್ನೇ ದುಡಿಸಿಕೊಂಡು ತಮ್ಮ ಆದಾಯದ ಮತ್ತೊಂದು ಮೂಲವನ್ನಾಗಿ ಮಾಡಿಕೊಂಡಿರುತ್ತಾರೆ. ಎರಡು ವಿಧದಲ್ಲಿ ನೀವು ಯಾವುದೇ ರೀತಿ ಯೋಚಿಸಿದರೂ ಸರ್ಕಾರದ ಈ ಒಂದು ಯೋಜನೆಯು ನಿಮಗೆ ಅನುಕೂಲಕ್ಕೆ ಬರಲಿದೆ.
ಭಾರತೀಯ ಅಂಚೆ ಕಚೇರಿಯು ಪರಿಚಯಿಸುತ್ತಿರುವ ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ (POMIS) ಪ್ರತಿ ತಿಂಗಳು ನಿಶ್ಚಿತ ಆದಾಯ ನೀಡುವಂತಹ, ಕೇಂದ್ರ ಸರ್ಕಾರದಿಂದಲೇ ನಿಮ್ಮ ಹಣಕ್ಕೆ ಭದ್ರತೆ ನೀಡುವಂತಹ ಯೋಜನೆಯಾಗಿದೆ.
ಈ ಸುದ್ದಿ ಓದಿ:-Central Bank: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಉದ್ಯೋಗಾವಕಾಶ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ವೇತನ 30,000
ರಿಟೈರ್ ಹಂತದಲ್ಲಿ ಇರುವವರು ಇದುವರೆಗಿನ ಉಳಿತಾಯ ಅಥವಾ ಈ ಹಂತದಲ್ಲಿ ಸಿಗುವ ದೊಡ್ಡ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಅಥವಾ ದುಡಿಯುತ್ತ ಇರುವವರು ಈ ಮೇಲೆ ತಿಳಿಸಿದಂತೆ ತಿಂಗಳ ಹೆಚ್ಚುವರಿ ಆದಾಯಕ್ಕಾಗಿ ಉಳಿತಾಯವನ್ನೆಲ್ಲ ಹೂಡಿಕೆ ಮಾಡಲೂಬಹುದು.
ಇನ್ನು ಮುಂದುವರೆದು ದೂರದ ಶಾಲೆ ಕಾಲೇಜುಗಳಲ್ಲಿ ಇರುವ ಓದುವ ಮಕ್ಕಳಿಗೆ ಪ್ರತಿ ತಿಂಗಳು ಹಣ ನೀಡಲಾಗದ ಅಥವಾ ಒಂದೇ ಬಾರಿಗೆ ಹೆಚ್ಚು ಹಣ ನೀಡಲು ಬಯಸದ ಪೋಷಕರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಯಾಕೆಂದರೆ ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದರೆ.
ಐದು ವರ್ಷಗಳವರೆಗೆ ಪ್ರತಿ ತಿಂಗಳು ನಿಮ್ಮ ಹಣಕ್ಕೆ ನಿಯಮದ ಪ್ರಕಾರ ಅನ್ವಯವಾಗುವ ಬಡ್ಡಿದರದ ಲಾಭವು ಉಳಿತಾಯ ಖಾತೆಗೆ ಪ್ರತಿ ತಿಂಗಳು ಜಮೆ ಆಗುತ್ತದೆ ಮತ್ತು ಮೆಚುರಿಟಿ ಆದ ಬಳಿಕ ನಿಮ್ಮ ಹೂಡಿಕೆ ಮೊತ್ತ ಯಾವುದೇ ಕಡಿತಗಳಿಲ್ಲದೆ ಕೈ ಸೇರುತ್ತದೆ. ಹಾಗಾಗಿ ಭಾರತದ ಬೆಸ್ಟ್ ಯೋಜನೆ ಎಂದು ಈ ಯೋಜನೆ ಕರೆಸಿಕೊಂಡಿದೆ. ನೀವು ಆಸಕ್ತರಾಗಿದ್ದರೆ ಯೋಜನೆ ಕುರಿತ ಇನ್ನಷ್ಟು ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- Power: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಸರ್ಕಾರದಿಂದ ಚಾಲನೆ.! ಇನ್ಮುಂದೆ ಬಿಲ್ ಕಟ್ಟುವ ಟೆನ್ಶನ್ ಬೇಡ.!
* ಕನಿಷ್ಠ ರೂ.1000 ದಿಂದ ಒಬ್ಬ ವ್ಯಕ್ತಿ ಗರಿಷ್ಠ ರೂ.9 ಲಕ್ಷ ಹಾಗೂ ಜಂಟಿಯಾಗಿ ರೂ.15 ಲಕ್ಷದವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
* ಪ್ರಸಕ್ತ ಸಾಲಿನಲ್ಲಿ 7.4% ಬಡ್ಡಿದರ ನಿಗದಿಯಾಗಿದೆ ಹಾಗೂ ಪ್ರತಿ ತ್ರೈಮಾಸಿಕೊಮ್ಮೆ ಇದು ಪರಿಷ್ಕೃತವಾಗುತ್ತಿರುತ್ತದೆ.
* ಒಬ್ಬ ವ್ಯಕ್ತಿ ತನ್ನ ಹೂಡಿಕೆ ಮಿತಿಯೊಳಗೆ ಎಷ್ಟು ಬೇಕಾದರೂ ಖಾತೆ ತೆರೆಯಬಹುದು ಮತ್ತು ಖಾತೆ ತೆರೆಯುವ ಸಮಯದಲ್ಲಿ ಆತ ಸೂಚಿಸುವ ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಇನ್ನಾದರೂ ಯಾವುದೇ ಬ್ಯಾಂಕಿನ ಉಳಿತಾಯ ಖಾತೆಗೆ ಪ್ರತಿ ತಿಂಗಳು ಬಡ್ಡಿರೂಪದ ಹಣವು ಜಮೆ ಆಗುತ್ತಾ ಹೋಗುತ್ತದೆ.
* ಯಾವುದೇ ಕಾರಣಕ್ಕೂ ಯೋಜನೆ ಆರಂಭಿಸಿದ ಒಂದು ವರ್ಷದೊಳಗೆ ಹೂಡಿಕೆ ಹಣ ಹಿಂಪಡೆಯಲು ಸಾಧ್ಯವಿಲ್ಲ ಒಂದು ವರ್ಷವಾದ ಬಳಿಕ ಮೆಡಿಕಲ್ ಅಥವಾ ಕಾನೂನು ರೂಪದ ಎಮರ್ಜೆನ್ಸಿ ಗಾಗಿ ಖಾತೆ ರದ್ದುಪಡಿಸಲು ಅವಕಾಶವಿದೆ.
* ಹತ್ತು ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರಾದ ಯಾರು ಬೇಕಾದರೂ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಕೆಲವೇ ನಿಮಿಷಗಳಲ್ಲಿ ಈ ಖಾತೆ ತೆರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಗಳಲ್ಲಿ ಹುಡುಕಾಡಿ.