Pradhan Mantri Ujjwala Yojana:
ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhana mantri ujwala scheme) ಕೇಂದ್ರದ ಪ್ರಮುಖ ಯೋಜನೆ(scheme)ಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಮೊದಲು ಪ್ರಾರಂಭಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ಅವರು. ಮೇ 1, 2016 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಇದಕ್ಕೆ ಚಾಲನೆ ನೀಡಿದರು.
ಈ ಸುದ್ದಿ ಓದಿ:- Indian Bank: ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಆಹ್ವಾನ.! ವೇತನ: ₹ 48,480
ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhan Mantri Ujjwala Yojana) ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (Ministry of Petroleum and Natural Gas- MOPNG) ಅಡಿಯಲ್ಲಿ ಬರುವ ಪ್ರಮುಖ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್(Free LPG cylinder) ನೀಡಲಾಗುತ್ತದೆ. ಇದು ಇಂಧನದ ಸುರಕ್ಷತೆ(Fuel safety)ಯನ್ನು ಹೆಚ್ಚಿಸುವುದು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ.
ಈ ಯೋಜನೆಯ ಉದ್ದೇಶ
ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಹೆಚ್ಚು ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಕಲ್ಲಿದ್ದಲು, ಹಸುಸವಿನ ರೊಟ್ಟಿ, ಉರುವಲು, ಬೆಳೆ ಶೇಷ ಇತ್ಯಾದಿಗಳನ್ನು ಬಳಸುತ್ತಿದ್ದ ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವುದು ಈ ಯೋಜನೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವಾಗಿದೆ.
ಈ ಸುದ್ದಿ ಓದಿ:- Anna Bhagya: ಇನ್ಮುಂದೆ ಅನ್ನಭಾಗ್ಯ ಅಕ್ಕಿ ಹಣ ಸಿಗಲ್ಲ.! ರಾತ್ರೋರಾತ್ರಿ ಮಹತ್ವದ ಘೋಷಣೆ ಮಾಡಿದ ಸರ್ಕಾರ.!
ಈ ರೀತಿಯ ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯು ನಮ್ಮ ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಬಹಳ ಕೆಟ್ಟ ಪರಿಣಾಮಗಳನ್ನು ಬೀರಿತ್ತು. ಈ ರೀತಿಯ ಸಾಂಪ್ರದಾಯಿಕ ಇಂಧನಗಳ ಬಳಕೆಯಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡುವುದು ಕೂಡ ಈ ಯೋಜನೆಯ ಮತ್ತೊಂದು ಮಹತ್ವದ ಗುರಿಯಾಗಿದೆ.
ಈ ಯೋಜನೆಯಲ್ಲಿ ಏನೆಲ್ಲಾ ನೀಡಲಾಗುತ್ತದೆ?
ಯೋಜನೆಯ ಪ್ರಯೋಜನಗಳ ಕಡೆ ಗಮನಹರಿಸುವುದಾದರೆ 14.2 ಕೆಜಿ ಸಿಲಿಂಡರ್ ಸಂಪರ್ಕಕ್ಕಾಗಿ 1,600 ರೂ.ಗಳ ಅಥವಾ ಸಿಲಿಂಡರ್ ಅನ್ನೇ ನೀಡಲಾಗುತ್ತದೆ. ಅಲ್ಲದೆ 5 ಕೆಜಿ ಸಿಲಿಂಡರ್‌ಗೆ 1,150 ರೂ.ಗಳು ಅಥವಾ ಸಿಲಿಂಡರ್ ನೀಡಲಾಗುತ್ತದೆ. ಪ್ರತಿ ಗ್ಯಾಸ್ ಸಿಲಿಂಡರ್ ರೀಫಿಲ್ ಮೇಲೆ 300 ರೂ.ಗಳ ಸಹಾಯಧನ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು
- – ಮಹಿಳಾ ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು
– ಎಸ್‌ಸಿ/ಎಸ್‌ಟಿ ಕುಟುಂಬಗಳು
– ಅತ್ಯಂತ ಹಿಂದುಳಿದ ವರ್ಗಗಳು
– ಬುಡಕಟ್ಟು ಜನರು
– ದ್ವೀಪಗಳು/ನದಿ ದ್ವೀಪದ ನಿವಾಸಿಗಳು
– ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು
ಯಾವೆಲ್ಲಾ ದಾಖಲೆಗಳು ಅಗತ್ಯ
- – ಆಯಾ ರಾಜ್ಯ ಸರ್ಕಾರ ನೀಡಿದ ಪಡಿತರ ಚೀಟಿ
– ವಿಳಾಸ ಪುರಾವೆ
– ಮತದಾರರ ಗುರುತಿನ ಚೀಟಿ
– ಆಧಾರ್ ಕಾರ್ಡ್
– ವಿದ್ಯುತ್, ನೀರು ಅಥವಾ ಫೋನ್ ಸಂಪರ್ಕ ಬಿಲ್‌ಗಳು
– ಅರ್ಜಿದಾರರ ಬ್ಯಾಂಕ್ ಪಾಸ್ಬುಕ್
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಫಲಾನುಭವಿಯು ಉಜ್ವಲ ಯೋಜನೆಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಈ ಲಿಂಕ್ ಕ್ಲಿಕ್ ಮಾಡಬಹುದಾಗಿದೆ. https://pmuy.gov.in/ujjwala2.html
ಇನ್ನೂ, BPL ಕುಟುಂಬದ ಅರ್ಹ ಮಹಿಳಾ ಅಭ್ಯರ್ಥಿಗಳು ಉಜ್ವಲಾ ಯೋಜನೆ KYC ಅರ್ಜಿ ನಮೂನೆಯನ್ನು (ನಿಗದಿತ ನಮೂನೆಯಲ್ಲಿ) ಭರ್ತಿ ಮಾಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು 2 ಪುಟದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಫಾರ್ಮ್‌ನೊಂದಿಗೆ ಅಗತ್ಯ ದಾಖಲೆಗಳನ್ನು ನೀಡಬೇಕು. ಅರ್ಜಿಯನ್ನು ಭರ್ತಿ ಮಾಡಲು ಹೆಸರು, ಸಂಪರ್ಕ ವಿವರಗಳು, ಜನ್ ಧನ್ / ಬ್ಯಾಂಕ್ ಖಾತೆ(Bank Account) ಸಂಖ್ಯೆ, ಆಧಾರ್ ಕಾರ್ಡ್(Aadhar card) ಸಂಖ್ಯೆ ಮುಂತಾದ ಮೂಲ ವಿವರಗಳು ಅಗತ್ಯವಿದೆ. ಉಜ್ವಲ ಯೋಜನೆಗಾಗಿ KYC ಅರ್ಜಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಜೊತೆಗೆ ಹತ್ತಿರದ ಎಲ್‌ಪಿಜಿ ಔಟ್‌ಲೆಟ್‌ಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
– ತುರ್ತು ಸಹಾಯವಾಣಿ ಸಂಖ್ಯೆ : 1906.
– ಟೋಲ್ ಫ್ರೀ ಸಹಾಯವಾಣಿ :- 18002333555, 1800-266-6696
– ಉಜ್ವಲಾ ಸಹಾಯವಾಣಿ :-18002666696.