Property:
ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆದಂತೆ ದಾಯಾದಿಗಳು ಎನ್ನುವ ಮಾತು ಅಂದಿನಿಂದ ಇಂದಿನವರೆಗೆ ಎಲ್ಲ ಕುಟುಂಬದ ಅಣ್ಣ-ತಮ್ಮಂದಿರಿಗೂ ಕೂಡ ಅನ್ವಯಿಸಿದೆ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಕೂಡ ರಾಜ್ಯಕ್ಕಾಗಿ ಅಣ್ಣತಮ್ಮಂದಿರ ನಡುವೆ ಯುದ್ಧಗಳು ನಡೆದಿರುವುದು ಕಣ್ಣೆದುರಿಗೆ ಸಾಕ್ಷಿಯಾಗಿ ಇದೆ. ಅಂದಿನ ರಾಜ ನೀತಿಯಂತೆ ಇಂದು ಭಾರತದ ಸರ್ಕಾರದಲ್ಲಿ ಕಾನೂನು ಮಾನ್ಯವಾಗಿದ್ದು, ಕಾನೂನಿನಲ್ಲಿ ಇಂತಹ ತೊಡಕುಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಪರಿಹಾರ ಇದ್ದೆ ಇದೆ.
ಹಾಗಾಗಿ, ಪ್ರತಿಯೊಬ್ಬ ಕುಟುಂಬದ ಸದಸ್ಯರು ಕೂಡ ಆಸ್ತಿ ಹಂಚಿಕೆ ವಿಚಾರದಲ್ಲಿ ಇರುವ ವಿವರಗಳನ್ನು ಸರಿಯಾಗಿ ತಿಳಿದುಕೊಂಡು ಹಕ್ಕು ಇದ್ದಲ್ಲಿ ಮಾತ್ರ ಪ್ರಶ್ನೆ ಮಾಡುವುದು ಅಥವಾ ನ್ಯಾಯಾಲಯದಲ್ಲಿ ಧಾವೇ ಹೋಗುವುದು ಒಳ್ಳೆಯದು. ಅದಕ್ಕಾಗಿ ಈ ಲೇಖನದಲ್ಲಿ ಅಂತಹ ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.
ಕಾನೂನಿಯ ನಿಯಮದ ಪ್ರಕಾರ ಮಕ್ಕಳು ತಂದೆಯ ಆಸ್ತಿಯ ಮೇಲೆ ಹುಟ್ಟಿನಿಂದಲೇ ತಮ್ಮ ಹಕ್ಕನ್ನು ಹೊಂದಿರುತ್ತಾರೆ. ಆಸ್ತಿ ಹಂಚಿಕೆಯ ಸಮಯದಲ್ಲಿ ಕಾನೂನಿನ ನಿಯಮದ ಪ್ರಕಾರ ಆಸ್ತಿ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಕಾನೂನು ಬಾಹಿರವಾಗಿ ಯಾವುದೇ ಆಸ್ತಿಯು ಹಂಚಿಕೆಯಾಗಿದ್ದರೆ ಕಾನೂನಿನಲ್ಲಿ ಮೊಕ್ಕದ್ದಮ್ಮೆಯನ್ನು ಹೂಡುವ ಅವಕಾಶ ಇರುತ್ತದೆ. ಇನ್ನು ಅಣ್ಣನ ಆಸ್ತಿಯ ಮೇಲೆ ತಮ್ಮನ ಅಧಿಕಾರದ ಬಗ್ಗೆ ಕಾನೂನಿನಲ್ಲಿ ನಿಯಮವಿದೆ. ಆಸ್ತಿಯಲ್ಲಿ ಸ್ವ- ಸ್ವಾದೀನ ಆಸ್ತಿ ಮತ್ತು ಪೂರ್ವಜರ ಆಸ್ತಿ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
ವ್ಯಕ್ತಿಯು ಸ್ವಯಂ ಸಂಪಾಧಿಸಿದ ಆಸ್ತಿಯನ್ನು ಸ್ವ- ಸ್ವಾದೀನ ಆಸ್ತಿ ಎನ್ನಲಾಗುತ್ತದೆ ಹಾಗೆಯೆ ಹಲವಾರು ತಲೆಮಾರುಗಳಿಂದ ಅಂದರೆ ತಾತ, ಮುತ್ತಾತ ತಂದೆಯಿಂದ ಪಡೆದ ಆಸ್ತಿ ಪೂರ್ವಜರ ಆಸ್ತಿ ಆಗಿರುತ್ತದೆ. ಇನ್ನು ತಂದೆಯ ಆಸ್ತಿ ಹಾಗೂ ಪೂರ್ವಜರ ಆಸ್ತಿಯಲ್ಲಿ ಮಕ್ಕಳು ಸಮಾನ ಹಕ್ಕನ್ನು ಹೊಂದಿರುತ್ತಾರೆ.
ಜಮೀನು ಹೊಂದಿರುವವರಿಗೆ ಅಣ್ಣ ಆಗಿರಬಹುದು ತಮ್ಮ ಆಗಿರಬಹುದು ಯಾರೇ ಆಗಿದ್ದರು ಆಸ್ತಿಯಲ್ಲಿ ಪಾಲುಗಳು ಇದ್ದೇ ಇರುತ್ತದೆ. ಆಸ್ತಿಯಲ್ಲಿ ನಿಮಗೆ ಏನಾದರೂ ಪಾಲು ಎಂಬುದು ಬೇಕಾದರೆ ಇದರಿಂದ ಒಳ್ಳೆಯ ಪ್ರಮುಖ ಮಾಹಿತಿಯನ್ನ ಪಡೆದುಕೊಳ್ಳಲು ಸಾಧ್ಯ. ಅಣ್ಣ ತಮ್ಮಂದಿರು ಹೇಗೆ ಆಸ್ತಿಯನ್ನ ಭಾಗ ಮಾಡಿಕೊಳ್ಳಬೇಕು ಯಾವ ರೀತಿ ಪಾಲನ್ನು ನೀಡಬೇಕು ಎಂಬುದನ್ನು ತಿಳಿಯೋಣ. ಅಣ್ಣ ಅಥವಾ ತಮ್ಮ ಯಾರೇ ಆಗಿದ್ದರೂ ಅವರು ಸ್ವಂತವಾಗಿ ಆಸ್ತಿಯನ್ನು ಭಾಗ ಮಾಡಿಕೊಂಡಿದ್ದರೆ ಅಥವಾ ಅವರೇ ನಡೆಸುತ್ತಿದ್ದರೆ ಅಣ್ಣ ಅಥವಾ ತಮ್ಮನಿಗೆ ಅದ್ರಲ್ಲಿ ಆಸ್ತಿಯಲ್ಲಿ ಪಾಲು ಇದೆಯೇ.
ಒಂದು ಕುಟುಂಬದಲ್ಲಿ ಎಷ್ಟು ಪ್ರಮಾಣದ ಆಸ್ತಿ ಇದೆ ಎಂಬುದನ್ನು ಮೊದಲು ಲೆಕ್ಕ ಹಾಕಿಕೊಳ್ಳಬೇಕು. ಕುಟುಂಬದವರೆಲ್ಲರೂ ಸೇರಿ ಜಂಟಿಯಾಗಿ ಖರೀದಿಸಿದ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಯನ್ನು ಒಟ್ಟು ಕುಟುಂಬದ ಆಸ್ತಿ ಅಂತ ಹೇಳಿ ಕರೆಯಲಾಗುತ್ತದೆ.
ಅಣ್ಣ ಎನ್ನುವನು ಕುಟುಂಬದ ಸದಸ್ಯರಾಗಿದ್ದರು ಅವರು ನಗರ ಭಾಗದಲ್ಲಿ ಪ್ರತ್ಯೇಕವಾಗಿ ಆಸ್ತಿಯನ್ನು ಏನಾದರೂ ಖರೀದಿ ಮಾಡಿದರೆ ತಮ್ಮ ಆದವನು ಪಾಲು ಕೇಳಲು ಬರುವುದಿಲ್ಲ. ತಂದೆ ಮತ್ತು ತಾಯಿಯನ್ನು ಸಂಪೂರ್ಣವಾಗಿ ಕೇಳುವ ಜವಾಬ್ದಾರಿ ತಂದೆ ಮತ್ತು ತಾಯಿ ಇಬ್ಬರಿಗೂ ಇರುತ್ತದೆ.
ಈ ಸುದ್ದಿ ಓದಿ:- Sukanya Samruddi Scheme: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ, ಅಕ್ಟೋಬರ್ 1 ರಿಂದಲೇ ಹೊಸ ನಿಯಮ ಜಾರಿ.!
ಭಾರತೀಯ ಕಾನೂನಿನ ಪ್ರಕಾರ ಅಣ್ಣನ ಸ್ವಾಯಾರ್ಜಿತ ಆಸ್ತಿಯಲ್ಲಿ ತಮ್ಮ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ವ್ಯಕ್ತಿಯು ಸ್ವಂತವಾಗಿ ಖರೀದಿಸಿದ ಆಸ್ತಿಯು ಸ್ವಯಾರ್ಜಿತ ಆಸ್ತಿ ಆಗುತ್ತದೆ. ಇನ್ನು ಸ್ವಯಾರ್ಜಿತ ಆಸ್ತಿಯ ಮಾಲೀಕನ ಮರಣದ ನಂತರ ಆಸ್ತಿಯು ಆತನ ಪತ್ನಿಗೆ ತಲುಪುತ್ತದೆ. ಪತ್ನಿಯ ಮರ.ಣದ ನಂತರ ಆತನ ಮಕ್ಕಳು ಆಸ್ತಿಯ ಹಕ್ಕನ್ನು ಪಡೆಯುತ್ತಾರೆ.
ಹೌದು, ಅಣ್ಣನು ಒಂದು ವೇಳೆ ಆಕಸ್ಮಿಕವಾಗಿ ಏನಾದರೂ ಮರಣ ಹೊಂದಿದರೆ ಅವನು ಹೊಂದಿರುವಂತಹ ಆಸ್ತಿಯಲ್ಲಿ ತಾಯಿ ಹೆಂಡತಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಪಾಲುಗಳು ದೊರೆಯುತ್ತದೆ. ಅವನಿಗೇನಾದರೂ ಮದುವೆಯಾಗಿ ಹೆಂಡತಿ ಮಕ್ಕಳು ಏನಾದರೂ ಇದ್ದರೆ ಅದು ಸಂಪೂರ್ಣವಾಗಿ ತಾಯಿ ಆಸ್ತಿ ಕೇಳುವ ಹಕ್ಕು ಇದ್ದೇ ಇರುತ್ತದೆ ಹೆಂಡತಿ ಮತ್ತು ಮಕ್ಕಳಿಗೂ ಸಹ ಇರುತ್ತದೆ. ಅಣ್ಣನಿಗೆ ಒಟ್ಟು ಕುಟುಂಬದ ಆಸ್ತಿಯ ಕೇಳುವ ಹಕ್ಕು ಇದ್ದೇ ಇರುತ್ತದೆ. ಜೊತೆಯಾಗಿ ಒಟ್ಟು ಕುಟುಂಬದ ಸಾಲ ಮತ್ತು ಋಣಗಳಲ್ಲಿ ಅವರಿಗೂ ಕೂಡ ಸಮಾನವಾದ ಪಾಲು ಎಂಬುದು ಇದ್ದೇ ಇರುತ್ತದೆ. ಒಂದು ಕುಟುಂಬ ಆಗಿರುವುದರಿಂದ ತಮ್ಮ ಅಣ್ಣನ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಬಹುದು.
ಇಲ್ಲ ಅಣ್ಣ ಕುಟುಂಬದ ಆಸ್ತಿಯನ್ನೇ ತಮ್ಮನಿಗೆ ಬಿಟ್ಟು ಕೊಡುವ ಅವಕಾಶ ಕೂಡ ಇರುತ್ತದೆ. ತಂದೆ ಮತ್ತು ತಾಯಿ ತಮ್ಮ ಪಾಲಿನ ಆಸ್ತಿ ಉಳುಮೆ ಮಾಡುತ್ತಿರುವ ಮಗನಿಗೆ ಕೊಡಬಹುದು. ತಮ್ಮ ಅಣ್ಣನಿಗೆ ಹಣದ ಸಹಾಯ ಮಾಡಿದ್ದೆ ಆದರೆ ಕೆಲವು ದಾಖಲೆಗಳನ್ನು ತೋರಿಸಿದ ನಂತರ ಪಾಲನ್ನು ಪಡೆದುಕೊಳ್ಳಬಹುದು.
ಅಣ್ಣ ಗಳಿಸಿದಂತಹ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಇದ್ದೇ ಇರುತ್ತದೆ ಅಣ್ಣ ಗಳಿಸಿದಂತಹ ಆಸ್ತಿಯಲ್ಲಿ ತಮ್ಮನಿಗೆ ಯಾವುದೇ ರೀತಿಯ ಪಾಲುಗಳು ಇರುವುದಿಲ್ಲ ಕೆಲವೊಂದ ವೇಳೆ ಏನಾದರೂ ಸಹಾಯ ಮಾಡಿದ್ದರೆ ಯಾವುದಾದರೂ ಸಾಕ್ಷಿಗಳಿದ್ದರೆ ಮಾತ್ರ ಅವುಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುವ ಸಾಧ್ಯವಾಗುತ್ತದೆ.
ಇನ್ನೂ, ಅಣ್ಣ ಆದವನು ವಿಲ್ ಬರೆಯದೆಯೇ ಅಕಸ್ಮಾತ್ ಆಗಿ ಸಾವನ್ನಪ್ಪಿದರೆ, ಅವನ ಆಸ್ತಿಯಲ್ಲಿ ತಂದೆ ಹಾಗೂ ತಾಯಿಗೆ ಹಕ್ಕು ಇರುತ್ತದೆ. ಆತನಿಗೆ ಮದುವೆಯಾಗಿದ್ದಲ್ಲಿ ಹೆಂಡತಿ ಮಕ್ಕಳಿಗೂ ಪಾಲು ಇರುತ್ತದೆ. ಹಾಗೆಯೇ ಒಟ್ಟು ಕುಟುಂಬದ ಆಸ್ತಿಯಲ್ಲಿ ಎಲ್ಲರಿಗೂ ಸಮ ಪಾಲು ಇರುತ್ತದೆ. ಅಕಸ್ಮಾತ್ ಆಗಿ ಕುಟುಂಬದ ಆಸ್ತಿಯಲ್ಲಿ ಯಾವುದಾದರೂ ಸಾಲ ಅಥವಾ ಋಣಗಳು ಇದ್ದಿದ್ದೇ ಆದರೆ, ಅದನ್ನು ಕೂಡ ಸಮವಾಗಿ ಹಂಚಿಕೊಳ್ಳಬೇಕಾಗುತ್ತದೆ.
ತಮ್ಮನಾದವನು ಅವಶ್ಯಕತೆ ಇದ್ದಲ್ಲಿ, ಅಣ್ಣನಿಗೆ ಸೇರಬೇಕಿರುವ ಪಾಲಿನ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳುವ ಅವಕಾಶವಿದೆ. ಆದರೆ, ಯಾವುದೇ ಕಾರಣಕ್ಕೂ ಅಣ್ಣನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ನೈತಿಕತೆಯ ಆಧಾರದ ಮೇಲೆ ಅಣ್ಣ ಬೇಖಿದ್ದರೆ, ತಮ್ಮನಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ನೀಡಬಹುದು. ಇನ್ನು ತಮ್ಮ ಉಳುಮೆ ಮಾಡುತ್ತಿದ್ದಲ್ಲಿ. ತಂದೆ-ತಾಯಿ ಉಳುಮೆ ಮಾಡುವ ಮಗನಿಗೆ ತಮ್ಮ ಪಾಲಿನ ಆಸ್ತಿಯನ್ನು ಕೂಡ ನೀಡಬಹುದು.
ಅಣ್ಣನಿಗೆ ಸಹಾಯ ಮಾಡಿದ್ದಲ್ಲಿ, ಅದರ ದಾಖಲೆಗಳು ಇದ್ದರೆ , ಅವನ್ನೆಲ್ಲಾ ತೋರಿಸಿ ತಮ್ಮ ಅಣ್ಣನ ಆಸ್ತಿಯಲ್ಲಿ ಪಾಲನ್ನು ಕೇಳಬಹುದು. ಅಣ್ಣ ಆದವನು ತಾನಿ ಗಳಿಸಿದ ಆಸ್ತಿ ಬಗ್ಗೆ ತಾನೇ ಸಂಪಅದಿಸಿದ್ದು ಎಂದು ದಾಖಲೆಗಳನ್ನು ಇಟ್ಟುಕೊಳ್ಳಬಹುದು. ಇನ್ನು ಪ್ರತಿಯೊಬ್ಬರ ಆಸ್ತಿ ಹಂಚಿಕೆ ವಿಚಾರದಲ್ಲಿ ಬೇರೆ ಬೇರೆಯಾದ ಹೊಣೆಗಾರಿಕೆಗಳಿರುವುದರಿಂದ ಅವರ ವಿವೇಚನೆಗೆ ಬಿಟ್ಟಿದ್ದು.