SBI Bank
ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ (Banking sector jobs) ಹರಸುತ್ತಿರುವ ಎಲ್ಲಾ ಆಕಾಂಕ್ಷಿಗಳಿಗೂ ಭಾರತದ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (State Bank of India) ಬೃಹತ್ ಅವಕಾಶ ಸಿಗುತ್ತಿದೆ. SBI ಬ್ಯಾಂಕ್ ಈ ವರ್ಷದಲ್ಲಿ ಎರಡನೇ ಬಾರಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ಅಧಿಕೃತ ಅಧಿಸೂಚನೆಯನ್ನು ಕೂಡ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಈ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಎಲ್ಲೋ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿ ಈ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ. ಹೀಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಪ್ರಮುಖ ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ವಿವರಣೆ ನೀಡುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ
ಉದ್ಯೋಗ ಸಂಸ್ಥೆ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆ ಹೆಸರು:- ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು (SO posts)
ಒಟ್ಟು ಹುದ್ದೆಗಳ ಸಂಖ್ಯೆ:- 1497 ಹುದ್ದೆಗಳು
ಹುದ್ದೆಗಳ ವಿವರ:
* ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಯ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ – 187
* ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಇನ್ಫ್ರಾ ಸಪೋರ್ಟ್ ಅಂಡ್ ಕ್ಲೌಡ್ ಆಪರೇಷನ್ಸ್ – 412
* ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್ ) – ನೆಟ್‌ವರ್ಕ್ ಆಪರೇಷನ್ಸ್ – 80
* ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್ – 27
* ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫಾರ್ಮೇಷನ್ಸ್ ಸೆಕ್ಯೂರಿಟಿ – 07
* ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಮ್) – 784
ಉದ್ಯೋಗ ಸ್ಥಳ:- ಮುಂಬೈ ಸೇರಿತದಂತೆ ದೇಶದ ಇತರೆ ನಗರಗಳಲ್ಲಿ ಇರುವ SBI ಬ್ಯಾಂಕ್ ಬ್ರಾಂಚ್ ಗಳಲ್ಲಿ
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಸಾರವಾಗಿ ರೂ.35,000 – ರೂ.70,000 ದವರೆಗೆ ವೇತನ ಇರುತ್ತದೆ.
* ಇದರೊಂದಿಗೆ ಇತರೆ ಸೌಲಭ್ಯಗಳು ಕೂಡ ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
* ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್ / ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್ ಇಂಜಿನಿಯರಿಂಗ್ / ಸಾಫ್ಟ್‌ವೇರ್ ಇಂಜಿನಿಯರಿಂಗ್ ಅಥವಾ ತತ್ಸಮಾನ ಪದವಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಕೆಲವು ಹುದ್ದೆಗೆ MCA, M.tec, MSc ಅನ್ನು ಇದೇ ಬ್ರ್ಯಾಂಚ್‌ಗಳಲ್ಲಿ ಪಾಸ್ ಮಾಡಿರುವ ಅಭ್ಯರ್ಥಿ ಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ ವಯೋಮಿತಿ 21 ವರ್ಷಗಳು
* ಉಳಿದ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 25 ವರ್ಷಗಳು
* ಗರಿಷ್ಠ ವಯೋಮಿತಿ 30 ವರ್ಷ
ಅರ್ಜಿ ಶುಲ್ಕ:-
* ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
* SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕಾ ವಿನಾಯಿತಿ ಇದೆ
* ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲಿಗೆ https://ibpsonline.ibps.in/sbisco2aug24/ ಈ ವೆಬ್ಸೈಟ್ಗೆ ಭೇಟಿ ನೀಡಿ.
* click for new application ಎನ್ನುವುದನ್ನು ಸೆಲೆಕ್ಟ್ ಮಾಡಿ ಸೂಚನೆಗಳಂತೆ ಮುಂದುವರೆಯಿರಿ.
* ನಿಮ್ಮ ವರ್ಗಕ್ಕೆ ಅನುಸಾರವಾದ ಅರ್ಜಿ ಶುಲ್ಕ ಪಾವತಿಸಿ, ಇ- ರಸೀದಿ ಪಡೆಯಿರಿ ಮತ್ತು ಅರ್ಜಿ ಸಲ್ಲಿಕೆ ಯಶಸ್ವಿಯಾದ ಕೃತಿ ಪ್ರತಿ ಪಡೆಯಿರಿ
ಆಯ್ಕೆ ವಿಧಾನ:-
* ಆನ್ಲೈನ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ
* ಆಯ್ಕೆ ಆದವರಿಗೆ ನೇರ ಸಂದರ್ಶನ ಹಾಗೂ ದಾಖಲೆಗಳ ಪರಿಸರ ನಡೆಸಿ ಆಯ್ದುಕೊಳ್ಳಲಾಗುತ್ತದೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (10, ಅಕ್ಟೋಬರ್ 2024.)