SBI Scholarship
ಅನೇಕ ಸಂಸ್ಥೆಗಳು (Institutions) ತಮ್ಮ ಅಧ್ಯಯನದಲ್ಲಿ ಆರ್ಥಿಕ ತೊಂದರೆ(Financial distress)ಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ(students) ಸಹಾಯ ಮಾಡಲು ಮತ್ತು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನ (Scholarship)ವನ್ನು ನೀಡುತ್ತವೆ.
ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳು(Public sector organizations) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಉಪಕ್ರಮದ ಭಾಗವಾಗಿ ವಿಶೇಷ ವಿದ್ಯಾರ್ಥಿವೇತನ(Special Scholarship)ವನ್ನು ನೀಡುತ್ತವೆ.
ಅದರಂತೇ SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ(Asha Scholarship Program) 2024 ಭವಿಷ್ಯದ ಶಿಕ್ಷಣಕ್ಕಾಗಿ ಹೊಸ ದಾರಿ ಎಂದೇ ಹೇಳಬಹುದಾಗಿದೆ. ಹೌದು, ಭಾರತದಲ್ಲಿ ಶಿಕ್ಷಣವು ಆರ್ಥಿಕ ಹಿನ್ನೆಲೆಯಿಂದ ಮುಂದಿನ ತಲೆಮಾರಿನ ಸಾಧನೆಗೆ ಪ್ರಮುಖ ಅಡಿಗಲ್ಲು ಆಗಿದೆ.
ದೇಶಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಲು ಎಸ್‌ಬಿಐ ಫೌಂಡೇಶನ್(SBI Foundation), SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ(SBIF Asha Scholarship Programm) 2024 ಅನ್ನು ಪ್ರಾರಂಭಿಸಿದೆ.
ಇದು ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಕಾರ್ಯಕ್ರಮಗಳಲ್ಲಿ ಒಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೌದದು, ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಎಸ್‌ಆರ್ ವಿಭಾಗವಾದ ಎಸ್‌ಬಿಐ ಫೌಂಡೇಶನ್ ಆಶಾ ಸ್ಕಾಲರ್‌ಶಿಪ್ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲವನ್ನು ನೀಡಿದೆ.
ಈ ವರ್ಷಕ್ಕೆ ಸಂಬಂಧಿಸಿದಂತೆ ಕಂಪನಿಯು ಇತ್ತೀಚೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. SBI ಆಶಾ ಸ್ಕಾಲರ್‌ಶಿಪ್ 2024 ಅರ್ಹತೆ, ಪ್ರಯೋಜನಗಳು, ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಇತರ ವಿವರಗಳ ಬಗ್ಗೆ ತಿಳಿದುಕೊಳ್ಳೋಣ ಎಸ್ ಬಿಐ ಫೌಂಡೇಶನ್ ಸಮಾಜ ಸೇವೆ ಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಗೊತ್ತೇ ಇದೆ.
ಇವುಗಳಲ್ಲಿ ಗ್ರಾಮೀಣ ಪ್ರದೇಶಗಳನ್ನು ಸುಧಾರಿಸುವುದು, ಆರೋಗ್ಯ, ಶಿಕ್ಷಣ, ಜೀವನೋಪಾಯ, ಯುವ ಸಬಲೀಕರಣ ಮತ್ತು ಕ್ರೀಡೆಗಳನ್ನು ಉತ್ತೇಜಿಸುವುದು ಸೇರಿವೆ. ಈ ಪ್ರತಿಷ್ಠಾನವು ಭಾರತದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ.
ಎಸ್‌ಬಿಐ ಸ್ಕಾಲರ್‌ಶಿಪ್ ಪ್ರೋಗ್ರಾಂ ಫೌಂಡೇಶನ್ ಎಜುಕೇಶನ್ ಇನಿಶಿಯೇಟಿವ್‌ನ ಭಾಗವಾಗಿದ್ದರೂ, ಇದನ್ನು ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ ಎಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮವು ಭಾರತದಲ್ಲಿ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುತ್ತದೆ. ಇದು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತದೆ. ವಿದ್ಯಾರ್ಥಿಗಳ ಪ್ರತಿಭೆ ಆಧರಿಸಿ ರೂ. 10 ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡುತ್ತದೆ.
ಎಸ್‌ಬಿಐ ಆಶಾ ಸ್ಕಾಲರ್‌ಶಿಪ್ 2024 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ಅಂತ್ಯ. ಅಧಿಕೃತ ವೆಬ್‌ಸೈಟ್ sbifoundation.in ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅನ್ವಯಿಸಿ. ಹೆಚ್ಚಿನ ವಿವರಗಳಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
SBIF ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2024
ಈ ಪ್ರೋಗ್ರಾಂ, ಎಸ್‌ಬಿಐ ಫೌಂಡೇಶನ್‌ನ (SBIF Asha Scholarship Programm)”ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ (ILM)” ಅಡಿಯಲ್ಲಿ ಪ್ರಾರಂಭಿಸಲಾಯಿತು, ಇದು 6ರಿಂದ 12ನೇ ತರಗತಿವರೆಗೆ ಮತ್ತು ಉನ್ನತ NIRF ರ‍್ಯಾಂಕಿಂಗ್‌ಗಳ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅರ್ಥಸಹಾಯವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಮುಂದುವರೆಸಲು ಐಎನ್‌ಆರ್ 7.5 ಲಕ್ಷದವರೆಗೆ ಆರ್ಥಿಕ ಬೆಂಬಲ ಪಡೆಯಬಹುದು.
ಅರ್ಜಿದಾರರ ಅರ್ಹತೆ
– ಭಾರತೀಯ ಪ್ರಜೆಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹ.
– 6ರಿಂದ 12ನೇ ತರಗತಿ ಹಾಗೂ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸಬಹುದು.
– ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಗಳಿಸಿರಬೇಕು.
– ಕುಟುಂಬದ ವಾರ್ಷಿಕ ಆದಾಯ INR 3,00,000 ಮಿತಿಯೊಳಗಿರಬೇಕು.
– 50% ಮೀಸಲಾತಿ ಮಹಿಳಾ ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
SBIF ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ 2024 – ಪ್ರಶಸ್ತಿ ವಿವರಗಳು
– 6 ರಿಂದ 12ನೇ ತರಗತಿವರೆಗೆ: ತಲಾ 15,000 ರೂ.
– ಪದವಿಪೂರ್ವ ವಿದ್ಯಾರ್ಥಿಗಳಿಗೆ: INR 50,000 ವರೆಗೆ.
– ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: INR 70,000 ವರೆಗೆ.
– IIT ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ: INR 2,00,000 ವರೆಗೆ.
– IIM ಗಳಲ್ಲಿ MBA ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ: INR 7,50,000 ವರೆಗೆ.
ಆವಶ್ಯಕ ದಾಖಲೆಗಳು:
– ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ.
– ಸರ್ಕಾರ ನೀಡಿದ ಗುರುತಿನ ಪುರಾವೆ (ಆಧಾರ್ ಕಾರ್ಡ್).
– ಪ್ರಸ್ತುತ ವರ್ಷದ ಶುಲ್ಕ ರಶೀದಿ.
– ಬನಫೈಡ್ ಪ್ರಮಾಣಪತ್ರ.
– ಅರ್ಜಿದಾರರ ಅಥವಾ ಪೋಷಕರ ಬ್ಯಾಂಕ್ ಖಾತೆ ವಿವರಗಳು.
– ಆದಾಯದ ಪುರಾವೆ.
– ಅರ್ಜಿದಾರರ ಭಾವಚಿತ್ರ.
– ಜಾತಿ ಪ್ರಮಾಣಪತ್ರ (ಅನ್ವಯವಾಗುವಲ್ಲಿ).
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 01, 2024.
ಅರ್ಜಿಯನ್ನು ಹೀಗೆ ಸಲ್ಲಿಸಿ :
ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ https://www.sbifoundation.in/focus-area-detail/SBIF-Asha-Scholarship
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 5: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.