Scholarship
AI ಸ್ಕಾಲರ್ಶಿಪ್ YATICORP ಕಾರ್ಡ್ ಯೋಜನೆ ಬಗ್ಗೆ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಈ ಕಾರ್ಡ್ ಎಷ್ಟು ಪ್ರಯೋಜನಕಾರಿ ಎಂದರೆ ಪ್ರಾಥಮಿಕ ಹಂತದ ಶಿಕ್ಷಣದಿಂದ ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ ಗಳನ್ನು ಕಲಿಯುವ ವಿದ್ಯಾರ್ಥಿಗಳವರೆಗೆ ಈ ಕಾರ್ಡ್ ನಿಂದ ಪ್ರತಿವರ್ಷವು ಗರಿಷ್ಠ ರೂ. 1 ಲಕ್ಷದವರೆಗೆ ವಿದ್ಯಾರ್ಥಿ ವೇತನ (AI YATICORP Scholarships card) ಪಡೆಯಬಹುದು ಹಾಗೂ ಉಚಿತವಾಗಿ AI ತರಬೇತಿ ಕೂಡ ಸಿಗುತ್ತದೆ.
ಹಾಗಾದರೆ ಈ ಕಾರ್ಡ್ ಪಡೆಯುವುದು ಹೇಗೆ? ನಂತರ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಹೇಗೆ? ಇತ್ಯಾದಿ ಎಲ್ಲಾ ವಿವರಕ್ಕೋಸ್ಕರ ಈ ಲೇಖನವನ್ನು ಕೊನೆಯವರೆಗೂ ಓದಿ. ಹಾಗೂ ನಿಮ್ಮ ಪರಿಚಿತ ವಿದ್ಯಾರ್ಥಿಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ AI ತಂತ್ರಜ್ಞಾನ ದಿನೇ ದಿನೇ ನಮ್ಮ ಬದುಕಿನಲ್ಲಿ ಎಷ್ಟು ಹಾಸು ಹೊಕ್ಕಾಗಿದೆ ಎನ್ನುವುದರ ಅನುಭವ ಎಲ್ಲರಿಗೂ ಆಗಿದೆ.
ಖಚಿತವಾಗಿ ಮುಂದಿನ ಪೀಳಿಗೆ AI ಅರಿವಿರದಿದ್ದರೆ ಯಾವ ಕ್ಷೇತ್ರದಲ್ಲೂ ಕೂಡ ಸಾಧನೆ ಮಾಡಲಾಗುವುದಿಲ್ಲ. ಹೀಗಾಗಿ ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕ ಹಾಗೆ ಶಾಲಾ ಹಂತದಲ್ಲಿಯೇ ಶಿಕ್ಷಣ ಪಡಿಸುವುದಕ್ಕಾಗಿ ಪೋಷಕರು ಹಾತೊರೆಯುತ್ತಿದ್ದಾರೆ ಆದರೆ ಇದಕ್ಕೆ ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪೋಷಕರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು.
ಈ ಕೊರತೆ ನೀಗಿಸಲು YATICORP ಮತ್ತು In Media Network ಸಂಸ್ಥೆಯು ಹೊಸ ಮಾದರಿಯ ಯೋಜನೆ ಯೊಂದನ್ನು ರೂಪಿಸಿದೆ ಈ ಯೋಜನೆಗೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ AI ಕಾರ್ಡ್ ದೊರೆಯುತ್ತದೆ ಈ ಕಾರ್ಡ್ ಮೂಲಕ ವಿದ್ಯಾರ್ಥಿಗಳು ಈ ಮೇಲೆ ತಿಳಿಸಿದ ಪ್ರಯೋಜನಗಳನ್ನು ಪಡೆಯಬಹುದು.
ಈ AI ಕಾರ್ಡ್ ಮೂರು ವಿಧಗಳಲ್ಲಿ ಇರುತ್ತದೆ.
1. AI Parent Card – 6ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಈ ಕಾರ್ಡ್ ಪಡೆಯಬಹುದು
2. AI Student Card – 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು 10ನೇ ತರಗತಿ, PUC, ಪದವಿ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಅಥವಾ ಇನ್ಯಾವುದೇ ವಿದ್ಯಾಭ್ಯಾಸ ಮಾಡುತ್ತಿದ್ದರು ಈ ಕಾರ್ಡ್ ಪಡೆದುಕೊಳ್ಳಬಹುದು
3. AI Complete Card – IAS, KAS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕಾರ್ಡ್ ಪಡೆಯಬಹುದು.
ಪ್ರಯೋಜನಗಳು:-
* AI ಕಾರ್ಡ್ ಹೊಂದಿದ ಪ್ರತಿ ವಿದ್ಯಾರ್ಥಿಗೂ AI ಶಿಕ್ಷಕ್ ಸ್ಮಾರ್ಟ್ ಲರ್ನಿಂಗ್ ತರಬೇತಿ (AI Shikshak Smart Learning ) ನೀಡಲಾಗುತ್ತದೆ, 10 ದಿನಗಳ ಈ ತರಬೇತಿ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ನಡೆಯುತ್ತದೆ
* ತರಬೇತಿಯಲ್ಲಿ ಶಾಲಾ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಶೈಕ್ಷಣಿಕ ಮಾರ್ಗದರ್ಶನ ದೊರೆಯುತ್ತದೆ.
* ಪಠ್ಯ, ನೋಟ್ಸ್ ಹಾಗೂ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ, ಪರೀಕ್ಷಾ ಪೂರ್ವ ತಯಾರಿಗೆ ವಿದ್ಯಾರ್ಥಿಗಳಿಗೆ ಪಠ್ಯವನ್ನು ಸರಿಯಾಗಿ ಅರ್ಥೈಸಲು ಸಹಾಯಕವಾಗುತ್ತದೆ
* AI Technology ಕಲಿಕೆಗೆ ಸಂಬಂಧಪಟ್ಟ ಮಾರ್ಗದರ್ಶನ ಹಾಗೂ ಸಲಹೆಗಳು ಕೂಡ ಸಿಗುತ್ತವೆ.
* ತರಬೇತಿ ಪೂರ್ತಿಗೊಳಿಸಿದ ಪ್ರತಿ ವಿದ್ಯಾರ್ಥಿಗೂ AI Complete Certificate ದೊರೆಯುತ್ತದೆ, ಇದರೊಂದಿಗೆ ಅತಿ ಮುಖ್ಯವಾಗಿಸ್ಕಾಲರ್ಶಿಪ್ ಸೌಲಭ್ಯ ಕೂಡ ಇದೆ. ಅದು ಈ ರೀತಿ ಇರುತ್ತದೆ.
* 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಡಾಕ್ಟರ್ ಎ.ಪಿ.ಜೆ ಅಬ್ದುಲ್ ಕಲಾಂ ಜೀನಿಯಸ್ ಸ್ಕಾಲರ್ಶಿಪ್ – ರೂ.50,000
* PUC, ಪದವಿ ವಿದ್ಯಾರ್ಥಿಗಳಿಗೆ ವಿಕ್ರಮ್ ಸಾರಾಬಾಯಿ ಎಕ್ಸೆಲೆನ್ಸ್ ಸ್ಕಾಲರ್ಶಿಪ್ – ರೂ.75,000
* ಸ್ನಾತಕೋತ್ತರ, ಇಂಜಿನಿಯರಿಂಗ್, MBBS, ಹಾಗೂ ಉನ್ನತ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳಿಗೆ ಸಿವಿ ರಾಮನ್ ವಿಶನರಿ ಸ್ಕಾಲರ್ಶಿಪ್ – ರೂ.75,000
* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಚಾಣಕ್ಯ ದಿ ಬ್ರಿಲಿಯನ್ಸ್ ಸ್ಕಾಲರ್ಶಿಪ್ ರೂ.1 ಲಕ್ಷ
ಕಾರ್ಡ್ ಪಡೆಯುವ ವಿಧಾನ:-
* ವಿದ್ಯಾರ್ಥಿಗಳು ಹಾಗೂ ಪೋಷಕರು 9535440195 ವಾಟ್ಸಾಪ್ ಸಂಖ್ಯೆ ಮೂಲಕ ಸರಳವಾಗಿ ನೋಂದಣಿ ಮಾಡಿಕೊಳ್ಳಬಹುದು
* ಪ್ರತಿ ಕಾರ್ಡ್ ಬೆಲೆ ರೂ.499, ಶುಲ್ಕ ಪಾವತಿಸಿ ವಿಳಾಸ ನಮೂದಿಸಿದರೆ ಕೊರಿಯರ್ ಮೂಲಕ ಕಾರ್ಡ್ ನಿಮ್ಮ ವಿಳಾಸಕ್ಕೆ ತಲುಪಲಿದೆ.