ಕರ್ನಾಟಕ ಮಹಿಳಾ ಶ್ರಮಶಕ್ತಿ ಯೋಜನೆ ಎನ್ನುವುದು ಹೆಸರೇ ಸೂಚಿಸುವಂತೆ ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯರು ಸ್ವಂತ ಉದ್ಯಮ ಅಥವಾ ವ್ಯಾಪಾರ ಆರಂಭಿಸುವುದಾದರೆ ಅವರಿಗೆ ಬಂಡವಾಳ ಕೊರತೆ ಉಂಟಾಗಬಾರದು ಎನ್ನುವ ಕಾರಣಕ್ಕಾಗಿ ಈ ಯೋಜನೆ ಮೂಲಕ ಹಣದ ನೆರವನ್ನು ನೀಡಲು ಸರ್ಕಾರ ಬಯಸಿದೆ.
ಈಗಾಗಲೇ ರಾಜ್ಯದಾದ್ಯಂತ ಬಹುತೇಕ ಮಹಿಳೆಯರು ಮಹಿಳಾ ಶ್ರಮ ಶಕ್ತಿ ಯೋಜನೆಯ (Shramashakthi Scheme) ಸದುಪಯೋಗ ಪಡೆದುಕೊಂಡಿದ್ದಾರೆ. ನೀವು ಕೂಡ ಆಸಕ್ತಿ ಹೊಂದಿದ್ದರೆ ಅರ್ಜಿ ಸಲ್ಲಿಸುವ ಕುರಿತಾಗಿ ಮತ್ತು ಯೋಜನೆ ಕುರಿತಾದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತೆಯರು ಹಾಗೂ ಸಹೋದರಿಯರೊಂದಿಗೆ ಕೂಡ ಹಂಚಿಕೊಳ್ಳಿ.
ಯೋಜನೆಯ ಹೆಸರು:- ಕರ್ನಾಟಕ ಶ್ರಮ ಶಕ್ತಿ ಯೋಜನೆ
ಯೋಜನೆಯ ಉದ್ದೇಶ:- ಈ ಯೋಜನೆ ಮೂಲಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ವ್ಯಾಪಾರ ಅಥವಾ ಉದ್ಯಮ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಸಬ್ಸಿಡಿ ರೂಪದ ಧನ ಸಹಾಯ ನೀಡುವುದು
ಪ್ರಯೋಜನ:-
* ಅರ್ಹ ಮಹಿಳೆಯರಿಗೆ ರೂ.50,000 ದವರೆಗೆ ಆರಂಭಿಕ ಬಂಡವಾಳವಾಗಿ ಸಹಾಯಧನ ನೀಡಲಾಗುತ್ತದೆ
* ಇದರಲ್ಲಿ ರೂ.25,000 ದವರೆಗೆ ಸಬ್ಸಿಡಿ ಇರುತ್ತದೆ. ಆದರೆ ಉಳಿದ ರೂ.25,000 ಹಣವನ್ನು ಮಹಿಳೆಯರು 32 ತಿಂಗಳ ಒಳಗೆ ಮರುಪಾವತಿಸಬೇಕು. ಇಲ್ಲವಾದಲ್ಲಿ ಮಹಿಳೆಯರು ಈ ಸಬ್ಸಿಡಿ ಸೌಲಭ್ಯವನ್ನು ಕಳೆದುಕೊಳ್ಳುತ್ತಾರೆ.
* ಒಂದು ವೇಳೆ ಹೆಚ್ಚಿನ ಧನ ಸಹಾಯ ಬೇಕಾದಲ್ಲಿ 4% ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಸೌಲಭ್ಯವು ದೊರೆಯುತ್ತದೆ.
* ಈ ಸಹಾಯಧನ ಪಡೆದು ಮಹಿಳೆಯರು ಸಣ್ಣ ಪುಟ್ಟ ವ್ಯಾಪಾರ ಅಥವಾ ಸಣ್ಣಪುಟ್ಟ ಉದ್ಯಮವನ್ನು ಆರಂಭಿಸಬಹುದು (ಕಿರಾಣಿ ಅಂಗಡಿ, ಫ್ಯಾನ್ಸಿ ಸ್ಟೋರ್, ಟೈಲರಿಂಗ್, ಬೋಟಿಕ್, ಹೋಟೆಲ್, ಇತ್ಯಾದಿ) ಅಥವಾ ಈಗಾಗಲೇ ಯಾವುದಾದರೂ ಉದ್ಯಮದಲ್ಲಿ ತೊಡಗಿಕೊಂಡಿದ್ದರೆ ಅದನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ ಈ ಯೋಜನೆ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಅರ್ಜಿ ಸಲ್ಲಿಸುವ ಮಹಿಳೆಯ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
* ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
* ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ ಒಳಗಿರಬೇಕು
* ಈಗಾಗಲೇ ಕುಟುಂಬದಲ್ಲಿ ಮತ್ಯಾವ ಮಹಿಳೆಯು ಈ ಯೋಜನೆಯ ಪ್ರಯೋಜನ ಪಡೆದಿರಬಾರದು
* ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆ ಇರಬೇಕು, ನಗರವಾಸಿಯ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರಬೇಕು
ಬೇಕಾಗುವ ದಾಖಲೆಗಳು:-
* ಅರ್ಜಿದಾರರ ಆಧಾರ್ ಕಾರ್ಡ್
* ವಯೋಮಿತಿಯ ಪ್ರಮಾಣ ಪತ್ರ
* KMDC ಯಿಂದ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆ
* ಖಾಯಂ ವಿಳಾಸದ ಪ್ರಮಾಣ ಪತ್ರ
* ಅರ್ಜಿದಾರರ ಬ್ಯಾಂಕ್ ಖಾತೆ ವಿವರ
* ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ ಈಗಾಗಲೇ ಪ್ರಾರಂಭ ಮಾಡಿರುವಂತಹ ಸ್ವಂತ ಉದ್ಯೋಗದ ಮಾಹಿತಿ
* ಸ್ವಯಂ ಘೋಷಣಾ ಪತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತ ಅರ್ಹ ಅಭ್ಯರ್ಥಿಗಳು ನೇರವಾಗಿ KMDC ಕಚೇರಿಗಳಿಗೆ, ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ಭೇಟಿ ನೀಡಿ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು
* ಅಥವಾ KMDC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೂಡ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.