Shrama Shakthi Yojana: ಮಹಿಳೆಯರಿಗೆ ಗುಡ್ ನ್ಯೂಸ್ 50 ಸಾಲ ಪಡೆದರೆ 25 ಸಾವಿರ ಉಚಿತ

Shrama Shakthi Yojana
ಶ್ರಮಶಕ್ತಿ ಯೋಜನೆಯಡಿ ಸಿಗಲಿದೆ 50 ಸಾವಿರ ಸಾಲ.! ನೀವು 25 ಸಾವಿರ ಕಟ್ಟಿದ್ರೆ ಸಾಕು 25 ಸಾವಿರ ಫ್ರೀ.!

ಕರ್ನಾಟಕ ಸರ್ಕಾರ(Government of Karnataka)ವು ಹಲವಾರು ಯೋಜನೆ(scheme)ಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ(Congress Govt)ವು ಈಗಾಗಲೇ 5‌ ಗ್ಯಾರಂಟಿ ಯೋಜನೆ(Guarantee scheme)ಗಳನ್ನು ಜಾರಿಗೆ ತಂದಿದ್ದು, ಯೋಜನೆ ಯಶಸ್ವಿಯಾಗಿದೆ. ಈ ನಡುವೆ ನಿಮಗೆ ಸಾಲ ಲಭ್ಯ ನೀಡುವ ಯೋಜನೆ ಬಗ್ಗೆ ತಿಳಿದಿದೆಯೇ?.

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ(minority community)ದ ಅನುಕೂಲಕ್ಕಾಗಿ, ಕರ್ನಾಟಕ ಸರ್ಕಾರವು ಶ್ರಮ ಶಕ್ತಿ ಯೋಜನೆ(Shram Shakti Yojana) 2024 ಅನ್ನು ಅನಾವರಣಗೊಳಿಸಿದೆ. ಸರ್ಕಾರವು ಈ ಕಾರ್ಯಕ್ರಮದ ಅಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಸದಸ್ಯರಿಗೆ ತಮ್ಮ ಸ್ವಂತ ವ್ಯವಹಾರ(own business)ಗಳನ್ನು ಪ್ರಾರಂಭಿಸಲು ಕಡಿಮೆ ಬಡ್ಡಿದರದ ಹಣಕಾಸು(Low interest rate financing) (ಶೇ 4 ರಿಂದ 5) ಮತ್ತು ಕೌಶಲ್ಯ ತರಬೇತಿ(Skill training)ಯನ್ನು ನೀಡುತ್ತದೆ.

WhatsApp Group Join Now
Telegram Group Join Now

ಕರ್ನಾಟಕದ ಮುಖ್ಯಮಂತ್ರಿಗಳು ಈ ಉಪಕ್ರಮವನ್ನು ಜಾರಿಗೆ ತಂದಿದ್ದು, ಜುಲೈ 2023 ರಲ್ಲಿ ಇದು ಜಾರಿಗೆ ಬಂದಿದೆ. ಅಲ್ಪಸಂಖ್ಯಾತ ಗುಂಪುಗಳ ಸದಸ್ಯರು ಈ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ವಿಭಾಗಗಳಲ್ಲಿ ಸರ್ಕಾರದಿಂದ ಕೌಶಲ್ಯ ತರಬೇತಿಯನ್ನು ಪಡೆಯಬಹುದಾಗಿದೆ. ಈ ಯೋಜನೆಗಳ ಪ್ರಯೋಜನ, ಸಾಲ ಮೊತ್ತ ಇತರೆ ವಿವರ ಇಲ್ಲಿದೆ ಮುಂದೆ ಓದಿ.

ಈ ಸುದ್ದಿ ಓದಿ:- Post Office: ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿದ್ರೆ 31 ಲಕ್ಷ ಸಿಗಲಿದೆ.!

ಶ್ರಮ ಶಕ್ತಿ ಯೋಜನೆಯು ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಕೂಡ ಸಹ ಹಣವನ್ನು ನೀಡುತ್ತದೆ. ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವು ಸಬ್ಸಿಡಿಯಾಗಿ ನೀಡಲಿದೆ. ನೀವು ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿಯನ್ನು ಮಾಡಬೇಕಾಗುತ್ತದೆ.

ಈ ಶ್ರಮ ಶಕ್ತಿ ಯೋಜನೆಯನ್ನ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯು ಜಾರಿಗೊಳಿಸಿದೆ. ಇದು ಕೂಡ ಸರ್ಕಾರಿ ಯೋಜನೆಯಾಗಿದೆ. ಆದ್ದರಿಂದ ನೀವು ಈ ಯೋಜನೆಯ ಮೂಲಕ 50000 ರೂ.ವರೆಗೆ ಹಣವನ್ನು ನೀವು ಸುಲಭವಾಗಿ ಪಡೆಯಬಹುದು.

ಶ್ರಮ ಶಕ್ತಿ ಯೋಜನೆಯ ಉದ್ದೇಶ, ಪ್ರಯೋಜನ?

ಶ್ರಮ ಶಕ್ತಿ ಯೋಜನೆಯ ಪ್ರಾಥಮಿಕ ಗುರಿಯು ಕರ್ನಾಟಕದಲ್ಲಿ ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರನ್ನು ತಮ್ಮ ಸ್ವಂತ ಕಂಪನಿಗಳನ್ನು ಪ್ರಾರಂಭಿಸಲು ಅಥವಾ ಉದ್ಯಮಿಗಳಾಗಲು ಸಹಾಯ ಮಾಡುವುದಾಗಿದೆ. ಉದ್ಯೋಗ ಮಾಡುತ್ತಿದ್ದರೂ ಆರ್ಥಿಕ ಸಮಸ್ಯೆ ಇದ್ದವರಿಗೂ ಪ್ರತ್ಯೇಕವಾಗಿ ವ್ಯಾಪಾರ ನಡೆಸಲು, ಉದ್ಯಮ ನಡೆಸಲು ಈ ಯೋಜನೆ ಸಹಾಯ ಮಾಡಲಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

– ಅರ್ಜಿದಾರರ ಆಧಾರ್ ಕಾರ್ಡ್ (Aadhaar card)
– ಅರ್ಜಿದಾರರ ವಯೋಮಿತಿಯ ಪ್ರಮಾಣ ಪತ್ರ
– ಅರ್ಜಿದಾರರ KMDC ಯಿಂದ ಪಡೆದುಕೊಂಡಿರುವಂತಹ ಅರ್ಜಿ ನಮೂನೆ
– ಅರ್ಜಿದಾರರ ಖಾಯಂ ವಿಳಾಸದ ಪ್ರಮಾಣ ಪತ್ರ
– ಅರ್ಜಿದಾರರ ಬ್ಯಾಂಕ್ ಖಾತೆ ವಿವರ
– ಅರ್ಜಿದಾರರ ನೀವು ಪ್ರಾರಂಭಿಸುತ್ತಿರುವಂತಹ ವ್ಯಾಪಾರದ ಬಗ್ಗೆ ಮಾಹಿತಿ ಅಥವಾ ಈಗಾಗಲೇ ಪ್ರಾರಂಭ ಮಾಡಿರುವಂತಹ ಸ್ವಂತ ಉದ್ಯೋಗದ ಮಾಹಿತಿ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳಿರಬೇಕು?

– ಅಲ್ಪಸಂಖ್ಯಾತ ಸಮುದಾಯದವಾಗಿರಬೇಕು.
– ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
– 18 ರಿಂದ 55 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು.
– ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆಯಿರಬೇಕು.
– ನಗರವಾಸಿಯ ವಾರ್ಷಿಕ ಆದಾಯವು 4 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು.

ಈ ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ?

ಈ ಶ್ರಮ ಶಕ್ತಿ ಯೋಜನೆ (Shrama Shakthi Scheme) ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಲು KMDC ಕಚೇರಿಗಳಿಗೆ ಭೇಟಿಯನ್ನು ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಈ ಮೇಲೆ ತಿಳಿಸಿದಂತಹ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗಿ KMDC ಕಚೇರಿಯಲ್ಲಿ ನೀಡುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ. ನೀವು KMDC ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕೂಡ ನೀವು ಆನ್ ಲೈನ್ ಮೂಲಕ ಕೂಡ ಅರ್ಜಿಯನ್ನ ಸಲ್ಲಿಸಬಹುದು ತುಂಬ ಸುಲಭವಾಗಿ.

ಆನ್ ಲೈನ್ ಮೂಲಕ ಹೀಗೆ ಅರ್ಜಿ ಸಲ್ಲಿಸಿ

ಹಂತ 1: ಮೊದಲನೆಯದಾಗಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://kmdc.karnataka.gov.in/)
ಹಂತ 2: ಈಗ ಮುಖಪುಟದಿಂದ, ಯೋಜನೆಗಳ ಆಯ್ಕೆಗೆ ಹೋಗಿ, ಶ್ರಮ ಶಕ್ತಿ ಸಾಲ ಯೋಜನೆ ಆಯ್ಕೆಯನ್ನು ಆರಿಸಿ.
ಹಂತ 3: ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ. ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ.

ಹಂತ 4: ಇ ಸೇವೆಗಳ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅದರ ಅಡಿಯಲ್ಲಿ ಆನ್‌ಲೈನ್ ಅಪ್ಲಿಕೇಶನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 5: ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ. ಹೊಸ ಪುಟದಲ್ಲಿ, ಅಲ್ಪಸಂಖ್ಯಾತರಿಗೆ ಸಾಲ / ಸಬ್ಸಿಡಿ ಟ್ಯಾಬ್ ಅಡಿಯಲ್ಲಿ apply online ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ಅರ್ಜಿ ನಮೂನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅರ್ಜಿ ನಮೂನೆಯು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಈ ಸುದ್ದಿ ಓದಿ:- Voter ID List : ಇಂದಿನಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ & ತಿದ್ದುಪಡಿ ಆರಂಭ.!

ಹಂತ 7: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು verify ಬಟನ್ ಕ್ಲಿಕ್ ಮಾಡಿ
ಹಂತ 8: ಹೆಸರು, ಹುಟ್ಟಿದ ದಿನಾಂಕ, ವಾರ್ಷಿಕ ಆದಾಯ, ಸಮುದಾಯ ಇತ್ಯಾದಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ
ಹಂತ 9: ಅರ್ಜಿ ನಮೂನೆಯನ್ನು ಸಲ್ಲಿಸಲು submit ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಮುದ್ರಿಸಿ.
ಹಂತ 10: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಫಾರ್ಮ್‌ಗೆ ಲಗತ್ತಿಸಿ. ಅಂತಿಮವಾಗಿ, ಫಾರ್ಮ್ ಅನ್ನು ಜಿಲ್ಲಾ ಆಯ್ಕೆ ಸಮಿತಿಗೆ ಸಲ್ಲಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment