Subsidy
ಮೂಲತಃ ಹಳ್ಳಿಗಳ ದೇಶವಾಗಿರುವ ನಮ್ಮ ಭಾರತದ ಪ್ರಮುಖ ಕಸುಬು ಕೃಷಿಯಾಗಿದೆ. ದೇಶದ ಕೋಟ್ಯಾಂತರ ಕುಟುಂಬಗಳು ಕೃಷಿ ಭೂಮಿಗಳನ್ನು ನಂಬಿಕೊಂಡು ಬದುಕುತ್ತಿವೆ. ಹಾಗೆಯೇ ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ ಆಗಿದ್ದರೂ ಇದಕ್ಕಿರುವ ಸವಾಲುಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅತಿವೃಷ್ಟಿ, ಅನಾವೃಷ್ಟಿ, ಅವೈಜ್ಞಾನಿಕ ಕೃಷಿ ಪದ್ಧತಿ, ಭೂ ಹಿಡುವಳಿಗಳು ಚಿಕ್ಕದಾಗಿರುವುದು ಸರಿಯಾದ ನೀರಾವರಿ ವ್ಯವಸ್ಥೆ ಇಲ್ಲದಿರುವುದು ಇನ್ನು ಇತ್ಯಾದಿ ಹತ್ತಾರು ಕಾರಣಗಳನ್ನು ವಿವರಿಸಬಹುದು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗಾಗಿ ಹಾಗೂ ಕೃಷಿ ಕ್ಷೇತ್ರ ಚೇತರಿಕೆ ಕಾಣುವಂತೆ ಮಾಡಲು ಪ್ರತಿ ಬಾರಿ ಬಜೆಟ್ ಮಂಡನೆ ಆಗಲು ದೊಡ್ಡ ಮೊತ್ತದಲ್ಲಿ ಹಣ ಮೀಸಲಿಟ್ಟು ಕೃಷಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸುತ್ತಿದೆ. ಅಂತೆಯೇ ಈ ಬಾರಿ ಕೂಡ ಸಣ್ಣ ಹಾಗೂ ಅತಿ ಸಣ್ಣ ರೈತರಿಗಾಗಿ ರೂ. 2 ಲಕ್ಷದವರೆಗೆ ಸಬ್ಸಿಡಿ ನೀಡುವ ಯೋಜನೆ ಕೈಗೊಳ್ಳಲಾಗಿದೆ. ಇದರ ಕುರಿತ ಕಂಪ್ಲೀಟ್ ವಿವರ ಹೀಗಿದೆ ನೋಡಿ.
ಯೋಜನೆಯ ವಿವರ:-
* ಇಲಾಖೆ ಸೂಚಿಸುವ 16 ಬಗೆಯ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೆ ತರಲಾಗಿದೆ (ಹಣ್ಣು, ಕಾಯಿ, ಮೆಕ್ಕೆಜೋಳ, ಪಪ್ಪಾಯಿ ಇಂತಹ ಬೆಳೆಗಳನ್ನು ಕೂಡ ಸೂಚಿಸಲಾಗುತ್ತದೆ.
* ಈ ಯೋಜನೆಯಡಿ ಸರ್ಕಾರವೇ ಸಸಿಗಳನ್ನು ಕೂಡ ನೀಡುತ್ತದೆ, ಇದಕ್ಕಾಗಿ ಯಾವುದೇ ಹೂಡಿಕೆ ಮಾಡಬೇಕಾದ ಅಗತ್ಯವೂ ಇಲ್ಲ. ನರ್ಸರಿಯಿಂದ ಇಲಾಖೆ ಸೂಚಿಸಿದ ಸಸಿಗಳನ್ನು ರೈತರ ಜಮೀನಿಗೆ ತರಲು ಉಂಟಾಗುವ ಸಾರಿಗೆ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ
* ಆದರೆ ಹೆಚ್ಚುವರಿ ಕೆಲಸಗಳಾದ ಬಿತ್ತನೆ ಮಾಡುವುದು, ಹೊಂಡ ತೊಡುವುದು, ರಸ ಗೊಬ್ಬರ ಮತ್ತು ಕ್ರಿಮಿಕೀಟನಾಶಗಳ ಸಿಂಪಡಣೆ, ನೀರಾವರಿ ವ್ಯವಸ್ಥೆ ಇತ್ಯಾದಿ ಕಾರಣಕ್ಕಾಗಿ ಹೆಚ್ಚಿನ ಬಂಡವಾಳದ ಅಗತ್ಯ ಇರುತ್ತದೆ. ಈ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರ ಸಬ್ಸಿಡಿ ರೂಪದಲ್ಲಿ ರೂ.2 ಲಕ್ಷ ನೀಡಲು ನಿರ್ಧರಿಸಿದೆ.
ಈ ಸುದ್ದಿ ಓದಿ:- Gadgets: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
* ರೂ.2 ಲಕ್ಷದ ಮಿತಿಯೊಳಗೆ ರೈತನ ಕಾಲ ಕಾಲದ ಅಗತ್ಯತೆಗೆ ಅನುಗುಣವಾಗಿ ಮೂರು ವರ್ಷಗಳವರೆಗೆ ಈ ಸಬ್ಸಿಡಿ ನಿರಂತರವಾಗಿ ದೊರಕುತ್ತದೆ.
* ಉದಾಹರಣೆಗೆ ರೈತನೊಬ್ಬ ಎಕರೆಗೆ 70 ಮಾವಿನ ಮರಗಳನ್ನು ನೆಟ್ಟರೆ ಮೊದಲ ವರ್ಷ ರೂ.51,367, 2ನೇ ವರ್ಷ ರೂ.28,550 ಹೀಗೆ ಮೂರು ವರ್ಷದ ಒಳಗೆ 2 ಲಕ್ಷದವರೆಗೆ ಹಂತ ಹಂತವಾಗಿ ಬೆಳೆ ಸಮೀಕ್ಷೆ ಮಾಡಿ ರೈತನಿಗೆ ಹಣ ಮಂಜೂರು ಮಾಡಲಾಗುತ್ತದೆ. ಹೀಗೆ ಪ್ರತಿಯೊಂದು ಬೆಳೆಗೂ ಪ್ರತ್ಯೇಕವಾದ ಮೊತ್ತ ನಿಗದಿಯಾಗಿರುತ್ತದೆ.
ಯೋಜನೆಯ ಉದ್ದೇಶ:-
* ಈ ಯೋಜನೆಯಿಂದ ತೋಟಗಾರಿಕಾ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಇದರೊಂದಿಗೆ ರೈತನ ಆದಾಯ ಕೂಡ ಹೆಚ್ಚುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತ ರೈತರು ಈ ಕೆಳಗೆ ತಿಳಿಸುವ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ NREGS ಕಛೇರಿಗಳಿಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಜಮೀನಿಗೆ ಸಂಬಂಧಪಟ್ಟ ದಾಖಲೆಗಳು
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಭರ್ತಿ ಮಾಡಿದ ಅರ್ಜಿ ಫಾರಂ
* ಜಾಬ್ ಕಾರ್ಡ್
* ಇನ್ನಿತರ ಪ್ರಮುಖ ದಾಖಲೆಗಳು