Subsidy
ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವುದು ಬಹುತೇಕರ ಕನಸು, ಉದ್ಯೋಗ ಎಷ್ಟೇ ದೊಡ್ಡಮಟ್ಟದ್ದಾದರೂ ತಿಂಗಳ ಸಂಬಳಕ್ಕಾಗಿ ಕಾಯಬೇಕು, ಅದೇ ಉದ್ಯಮವಾದರೆ ನಮ್ಮ ಅನುಕೂಲತೆಗೆ ತಕ್ಕ ಹಾಗೆ ಬಿಂದಾಸ್ ಆಗಿ ಇರಬಹುದು ಎನ್ನುವುದೇ ಅನೇಕರ ಇಚ್ಛೆ. ಅದರಲ್ಲೂ ಬಿಸಿನೆಸ್ ಮಾಡುವ ಐಡಿಯಾ ಇದ್ದರೆ ಸಾಕು ಯಾವುದೇ ವಯಸ್ಸು, ವಿದ್ಯಾರ್ಹತೆ ಅಡ್ಡಿ ಬರದೇ ಇರುವ ಕಾರಣ ಅನೇಕರು ಈ ಬಗ್ಗೆ ಆಸಕ್ತರಾಗಿರುತ್ತಾರೆ.
ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಉದ್ಯೋಗವಕಾಶ ಕಡಿಮೆ ಇರುವುದರಿಂದ ಹೆಚ್ಚಿನ ಜನರು ಇದನ್ನೇ ಅನುಸರಿಸುತ್ತಾರೆ. ನೀವು ಈ ಬಗ್ಗೆ ಆಸಕ್ತರಾಗಿದ್ದು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಸರ್ಕಾರದ ವಿಶೇಷ ಯೋಜನೆ ಮೂಲಕ ಸಹಾಯಧನ ಸಮೇತ ಸಾಲ ಸೌಲಭ್ಯ ಕೂಡ ಸಿಗುತ್ತಿದೆ. ಏನಿದು ಯೋಜನೆ? ಯಾರೆಲ್ಲ ಈ ಯೋಜನೆಗೆ ಅರ್ಹರು? ಈ ಯೋಜನೆ ಪ್ರಯೋಜನ ಪಡೆಯುವುದು ಹೇಗೆ? ಇತ್ಯಾದಿ ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:-
* ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
* ಮೈಕ್ರೋ ಕ್ರೆಡಿಟ್ (ಪ್ರೇರಣ) ಯೋಜನೆ
ಯೋಜನೆಯ ಉದ್ದೇಶ:-
* ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಮಹಿಳೆಯರಿಗಾಗಿ ಸರ್ಕಾರವು ಈ ಯೋಜನೆಯನ್ನು ಪರಿಚಯಿಸಿದೆ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು ಯೋಜನೆಯ ಉದ್ದೇಶವಾಗಿದೆ.
* ಈ ಯೋಜನೆಯ ಮೂಲಕ ಕಿರು ಉದ್ದಿಮೆಗಳಾದ ಹೂವು ಹಣ್ಣು ತರಕಾರಿ ವ್ಯಾಪಾರ, ಕಿರಾಣಿ ಅಂಗಡಿ, ಹಾಲಿನ ವ್ಯಾಪಾರ ಪೇಪರ್ ಪ್ಲೇಟ್ ತಯಾರಿಕೆ, ಟೈಲರಿಂಗ್ ಅಥವಾ ಬ್ಯೂಟಿ ಪಾರ್ಲರ್ ಓಪನ್ ಇನ್ನು ಇತ್ಯಾದಿ ಉದ್ದಿಮೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಬಹುದಾಗಿದೆ. ಈ ರೀತಿ ಪಡೆದ ಸಾಲಕ್ಕೆ ಸರ್ಕಾರದಿಂದ ಸಬ್ಸಿಡಿ ಕೂಡ ಇರುತ್ತದೆ.
ಸಹಾಯಧನದ ಮೊತ್ತ:-
1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಘಟಕ ವೆಚ್ಚ – ರೂ.01 ಲಕ್ಷ
ಸಹಾಯಧನ – ರೂ.50,000
ಸಾಲಸೌಲಭ್ಯ – ರೂಂ.50,000 (ಶೇ. 4% ಬಡ್ಡಿದರದ ಅನ್ವಯ)
2. ಮೈಕ್ರೋ ಕ್ರೆಡಿಟ್ (ಪ್ರೇರಣ) ಯೋಜನೆ
ಘಟಕ ವೆಚ್ಚ – ರೂ. 2.50 ಲಕ್ಷ
ಸಹಾಯಧನ – ರೂ. 1.5ಲಕ್ಷ
ಸಾಲ ಸೌಲಭ್ಯ – ರೂ.1ಲಕ್ಷ (ಶೇ.4% ಬಡ್ಡಿದರದಲ್ಲಿ)
ಅರ್ಹತೆಗಳು:-
* ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
* ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು
* ಕನಿಷ್ಠ 18 ವರ್ಷದಿಂದ ಗರಿಷ್ಠ 60 ವರ್ಷದ ಒಳಗಿರಬೇಕು
* ಯೋಜನೆಗೆ ಕೇಳಲಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕು
* ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು
* ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆಗೆ ಕನಿಷ್ಠ 10 ಸದಸ್ಯರುಳ್ಳ ಮಹಿಳಾ ಸ್ವಸಹಾಯ ಗುಂಪಿನವರು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು ಈ ಯೋಜನೆಗೆ ಬೇಕಾದ ಎಲ್ಲಾ ಪೂರಕ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಈ ಅರ್ಜಿ ಸಲ್ಲಿಸಬಹುದು
* ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ಕೂಡ ನೇರವಾಗಿ ಅರ್ಜಿ ಸಲ್ಲಿಸಬಹುದು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್ ಪ್ರತಿ
* ಪಾನ್ ಕಾರ್ಡ್ ಪ್ರತಿ
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ
* ಯೋಜನಾ ಘಟಕದ ವಿವರ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು
* ಮೈಕ್ರೋ ಕ್ರೆಡಿಟ್ ಪ್ರೇರಣ ಯೋಜನೆಗೆ ಅರ್ಜಿ ಸಲ್ಲಿಸಿದರೆ ಎಲ್ಲಾ ಸದಸ್ಯರ ಈ ಮೇಲೆ ತಿಳಿಸಿದ ದಾಖಲೆಗಳು ಬೇಕಾಗುತ್ತವೆ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23 ಅಕ್ಟೋಬರ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ನವೆಂಬರ್, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ದೂರವಾಣಿ ಸಂಖ್ಯೆ – 9482 300 400