Teachers Recruitment: 5,000 ಶಾಲಾ ಶಿಕ್ಷಕರ ನೇಮಕಾತಿ.! ವೇತನ 52,650/- ಆಸಕ್ತರು ಅರ್ಜಿ ಸಲ್ಲಿಸಿ.!

Teachers Recruitment

ಶಿಕ್ಷಕರಾಗುವ ಕನಸು ಕಾಣ್ತಿರೋ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದೆ. ರಾಜ್ಯ(State)ದಲ್ಲಿರುವ 15,000 ಅನುದಾನಿತ ಶಾಲೆಗಳಲ್ಲಿ (Govt Funded Schools) ಅಗತ್ಯವಿರುವ 5,000 ಶಿಕ್ಷಕರನ್ನು ನೇಮಕಾತಿ(Recruitment of teachers) ಮಾಡಿಕೊಳ್ಳುವುದಾಗಿ ಪ್ರಾಥಮಿಕ(Primary) ಮತ್ತು ಪ್ರೌಢ ಶಿಕ್ಷಣ(Secondary education) ಸಚಿವ ಮಧು ಬಂಗಾರಪ್ಪ(Madhu Bangarappa)ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now
ಈ ಸುದ್ದಿ ಓದಿ:- Ration Card: ಹೊಸ ರೇಷನ್ ಕಾರ್ಡ್, ಹೆಸರು ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವ್ಯಾವ ದಾಖಲೆಗಳು ಬೇಕು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಹೌದು, ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ (Government funded Schools) ಅಗತ್ಯವಿರುವ 5,000 ಶಿಕ್ಷಕರ ಹುದ್ದೆಗಳನ್ನು ಶೀಘ್ರದಲ್ಲಿಯೆ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ನಡೆಯಲಿದೆ ಶಿಕ್ಷಕರ ನೇಮಕಾತಿ ಪರ್ವ

ರಾಜ್ಯದ್ಯಂತ ಒಟ್ಟು 46,000 ಶಾಲಾ-ಕಾಲೇಜುಗಳಿದ್ದು, ಇವುಗಳ ಪೈಕಿ 15,000 ಅನುದಾನಿತ ಶಾಲೆಗಳಿವೆ. ಇಲ್ಲಿಯ ತನಕ 42,000 ಅತಿಥಿ ಶಿಕ್ಷಕರ ನೇಮಕಾತಿ ಹಾಗೂ 13,500 ಖಾಯಂ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಂಡಿದ್ದು, ಇನ್ನೂ 53,000 ಕಾಯಂ ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಈ ನೇಮಕಾತಿಗೆ ಸಂಬ೦ಧಿಸಿದ೦ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಆಯ್ಕೆಯಾದವರಿಗೆ ಸಿಗುವ ವೇತನವೆಷ್ಟು? ನೇಮಕಾತಿ ಯಾವಾಗ ಆರಂಭವಾಗಲಿದೆ? ಸೇರಿದಂತೆ ವಿವಿಧ ಹೆಚ್ಚಿನ ಮಾಹಿತಿ ಇಲ್ಲಿ ನೋಡೋಣ ಬನ್ನಿ…

ಅನುದಾನಿತತ ಶಾಲೆ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

ಸರ್ಕಾರಿ ಅನುದಾನಿತ ಶಾಲೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವ ಶಿಕ್ಷಕರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಖಾಲಿ ಇರುವ ಹುದ್ದೆಗಳಿಗೆ ಸಂಬ೦ಧಪಟ್ಟ ವಿಷಯದಲ್ಲಿ ಪದವಿ ಶಿಕ್ಷಣ ಮುಗಿಸಿರಬೇಕು. ನಂತರದಲ್ಲಿ ಬಿ.ಎಡ್ ಪದವಿ ಶಿಕ್ಷಣವನ್ನು ಮುಗಿಸಬೇಕು.

ವಯೋಮಿತಿ ಅರ್ಹತೆ?

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತಿದೆ..

– ಸಾಮಾನ್ಯ ವರ್ಗದವರಿಗೆ : 42 ವರ್ಷ
– 2ಎ, 2ಬಿ, 3ಎ, 3ಬಿ ವರ್ಗದವರಿಗೆ : 45 ವರ್ಷ
– ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ : 47 ವರ್ಷ

ಶಿಕ್ಷಕರ ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?

ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಎರಡು ಹಂತಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮೊದಲನೆಯ ಹಂತದಲ್ಲಿ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ನಡೆಸುವಂತಹ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಶೇ.60 ರಷ್ಟು ಅಂಕಗಳೊ೦ದಿಗೆ ಪಾಸಾಗಿರಬೇಕು. ನಂತರದಲ್ಲಿ ಇವರಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಮಾಸಿಕ ವೇತನ

ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡವರಿಗೆ ಮಾಸಿಕ 27,650 ರೂಪಾಯಿ ಯಿಂದ 52,650 ರೂಪಾಯಿ ತನಕ ವೇತನ ಸಿಗಲಿದೆ. ಜೊತೆಗೆ ಸರ್ಕಾರಿ ನೌಕರರಿಗೆಸಿಗುವಂತಹ ಎಲ್ಲ ಸವಲತ್ತುಗಳೂ ಅನ್ವಯವಾಗಲಿವೆ. ರಾಜ್ಯ ಸರ್ಕಾರ ಇತ್ತೀಚೆಗೆ 7ನೇ ವೇತನ ಆಯೋಗ ವರದಿಯ ಶಿಫಾರಸು ಜಾರಿ ಮಾಡಿದ್ದು, ಎಲ್ಲ ವೃಂದದ ನೌಕರರಿಗೆ ಸಿಗುವ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ಸರ್ಕಾರ ವಿಸ್ತರಿಸಿದೆ.

ನೇಮಕಾತಿ ಯಾವಾಗ ನಡೆಯಲಿದೆ?

ಆರ್ಥಿಕ ಇಲಾಖೆಯು ಕರ್ನಾಟಕ ರಾಜ್ಯದಲ್ಲಿರುವ 2013ರ ನಂತರ ಇಲ್ಲಿಯ ವರೆಗೆ ಸರ್ಕಾರಿ ಅನುದಾನಕ್ಕೆ ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ಅಗತ್ಯವಿರುವ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ. ಆದ್ದರಿಂದ ಈ ನೇಮಕಾತಿಯೂ ಕೂಡ ಶೀಘ್ರದಲ್ಲಿಯೇ ನಡೆಯುವ ಸಾಧ್ಯತೆಗಳಿವೆ. TET ಹಾಗೂ CET ಪರೀಕ್ಷೆಗಳಿಗೆ ಅಗತ್ಯವಿರುವ ಸಂಪೂರ್ಣ ತಯಾರಿಯನ್ನು ಈಗಿನಿಂದಲೇ ಆರಂಭಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment