ಭಾರತವು ಲೆಸ್ ಕ್ಯಾಶ್ (Less Cash) ಕಾನ್ಸೆಪ್ಟ್ ಗೆ ಬಹಳ ಬೇಗ ಹೊಂದಿಕೊಂಡಿದೆ. UPI ಆಧಾರಿತ ಆಪ್ ಗಳಾದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇವುಗಳ ಸರಳ ಬಳಕೆ ವಿಧಾನ ಸಹಕಾರದಿಂದ ಸಾಮಾನ್ಯನಿಗೂ ಕೂಡ ಆನ್ಲೈನ್ ನಲ್ಲಿ ವಹಿವಾಟು ಮಾಡುವಷ್ಟು ಅನುಕೂಲವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗೆ ನಾಂದಿಯಾಗಿದೆ.
ಟೆಕ್ನಾಲಜಿಯಲ್ಲಿ ಬಹಳ ಮುಂದುವರೆದು ಎಲ್ಲರ ಕೈಗಳಲ್ಲೂ ಆಂಡ್ರಾಯ್ಡ್ ಫೋನ್ ಗಳಿರುವುದು , ಅಗ್ಗದ ಇಂಟರ್ ನೆಟ್ ಸೌಲಭ್ಯ, ನೋಟ್ ಬ್ಯಾನ್ ಹಾಗೂ ಲಾಕ್ಡೌನ್ ನಲ್ಲಿ ಎದುರುಸಿದ್ದ ಸಂಧಿಗ್ದತೆಯ ಸಂದರ್ಭಗಳು ಈ ಪರಿಸಾಧಿಸುವುದಕ್ಕೆ, ಬಹಳ ಬೇಗ ಜನ ಆನ್ಲೈನ್ ವಹಿವಾಟಿಗೆ ಹೊಂದಿಕೊಳ್ಳುವುದಕ್ಕೆ ಕಾರಣವಾದವು ಎಂದರೂ ತಪ್ಪಾಗುವುದಿಲ್ಲ.
ಇಷ್ಟೆಲ್ಲದರ ನಡುವೆ ಇನ್ನು ಸುಧಾರಿಸಿಕೊಳ್ಳುವ ಅನೇಕ ಸಲಹೆಗಳಿವೆ. ಹಾಗಾಗಿ ಬಳಕೆದಾರದಿಂದ ಈ ಬಗ್ಗೆ ದೂರು, ಬೇಡಿಕೆಗಳು ಇದ್ದೇ ಇರುತ್ತದೆ. ಅದರಲ್ಲಿ ಕೆಲವನ್ನೀಗ ಈಡೇರಿಸಲಾಗಿದೆ. ಈ UPI ಬಹು ದೊಡ್ಡ ಸವಾಲೇನಾಗಿತ್ತೆಂದರೆ ಇದಕ್ಕೆ ಟ್ರಾನ್ಸಾಕ್ಷನ್ ಮಿತಿ ನಿಗದಿಪಡಿಸಲಾಗಿತ್ತು, ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಬೇರೆಯಾಗಿರುತ್ತಿತ್ತು.
ಕೆಲವು ಬ್ಯಾಂಕ್ಗಳು ಒಂದು ದಿನಕ್ಕೆ ರೂ.25,000 ದವರೆಗೆ ಮಿತಿ ಹೇರಿದ್ದರೆ ಇನ್ನು ಕೆಲವು ಬ್ಯಾಂಕ್ ಗಳು ಒಂದು ಬಾರಿಯ ಟ್ರಾನ್ಸಾಕ್ಷನ್ ಗೆ ಇಂತಿಷ್ಟೇ ಮೊತ್ತ ಎನ್ನುವ ಮಿತಿ ನಿಗದಿ ಪಡಿಸಿದ್ದರಿಂದ ಕೆಲ ವರ್ಗಕ್ಕೆ ಇದರಿಂದ ಬಹಳ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಇದರಲ್ಲಿ ವಿನಾಯಿತಿ ನೀಡಿ, UPI ಬಳಕೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.
ಈ ಬಗ್ಗೆ ನ್ಯಾಷನಲ್ ಪೇಮೆಂಟ್ ಆಫ್ ಕಾರ್ಪೊರೇಷನ್ (NPCI) ಆಗಸ್ಟ್ 24ರಂದು ಅಧಿಕೃತ ಸುತ್ತೋಲೆ ಹೊರಡಿಸಿ ಸೆಪ್ಟೆಂಬರ್ 16, 2024 ರಿಂದಲೇ ಅನ್ವಯವಾಗುವಂತಹ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಸುತ್ತೋಲೆಯಲ್ಲಿರುವ ಪ್ರಮುಖ ಅಂಶವೇನೆಂದರೆ, ತೆರಿಗೆ ಪಾವತಿಗಳಿಗೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ, ಹಾಗು IPO ಮತ್ತು RBI ರೀಟೇಲ್ ಡೈರೆಕ್ಟ್ ಸ್ಕೀಮ್ ಗಳಿಗೆ UPI ಮೂಲಕ ಹಣ ಪಾವತಿ ಮಾಡಲು ಒಂದೇ ಬಾರಿಗೆ 5 ಲಕ್ಷ ರೂ ವರೆಗೆ ಅನುಮತಿ ನೀಡಲಾಗಿದೆ.
ತೆರಿಗೆ ಪಾವತಿದಾರರಿಗೆ ಹಾಗೂ ವೈದ್ಯಕೀಯ ಶುಲ್ಕ ಹಾಗೂ ಶಿಕ್ಷಣ ಸಂಸ್ಥೆಗಳ ಶುಲ್ಕ ಪಾವತಿ ಹೀಗೆ ಕೆಲವು ಅವಶ್ಯಕ ಸಂದರ್ಭಗಳಲ್ಲಿರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಹೊಸ ನಿಯಮ ಮಾಡಲಾಗಿದೆ. ಈ ಮೇಲೆ ತಿಳಿಸಿದಂತೆ ರೂ.1 ಲಕ್ಷಕ್ಕಿಂತ ಹೆಚ್ಚು ಹೂಡಿಕೆಯ ಅವಶ್ಯಕತೆ ಇರುವ IPO ಮತ್ತು RBI ರೀಟೇಲ್ ಡೈರೆಕ್ಟ್ ಯೋಜನಾದಾರರಿಗೂ ಬಹಳ ಅನುಕೂಲವಾಗಲಿದೆ.
UPI ಮೂಲಕ ರೂ.5 ಲಕ್ಷದವರೆಗೆ ಒಂದೇ ಬಾರಿಗೆ ಹಣ ಪಾವತಿಸಲುಅವಕಾಶ ಇರುವುದರಿಂದ ಚೆಕ್ ಅಥವಾ ಕಾರ್ಡ್ ಬಳಕೆ ಮಾಡಬೇಕಾದ ತಲೆ ಬಿಸಿ ಇರುವುದಿಲ್ಲ ಈ ವಿಚಾರವಾಗಿ ಮತ್ತೊಂದು ಪ್ರಮುಖ ಸಂಗತಿ ಏನೆಂದರೆ, ಈಗಾಗಲೇ ಉಲ್ಲೇಖಿಸಲಾದ ನಿರ್ದಿಷ್ಟ ವ್ಯವಹಾರಗಳಿಗೆ ಮಾತ್ರವೇ ಈ ಮಿತಿ ಹೆಚ್ಚಳ ಅನ್ವಯವಾಗುತ್ತದೆ.
ಮಿತಿ ಹೆಚ್ಚಳ ಕುರಿತ NPCI ಹೊಸ ಸುತ್ತೋಲೆಯಂತೆ ಬ್ಯಾಂಕ್‌ಗಳು, ಪೇಮೆಂಟ್ ಸರ್ವಿಸ್ ಪೂರೈಕೆದಾರರು, UPI ಆ್ಯಪ್ ಗಳು ಸೇರಿದಂತೆ ಪೇಮೆಂಟ್ ಇನ್ಫ್ರಾಸ್ಟ್ರಕ್ಚರ್ ನಲ್ಲಿ ಭಾಗಿಯಾಗಿರುವ ಎಲ್ಲಾ ಸದಸ್ಯರಿಗೂ NPCI ಹೊಸ UPI ಟ್ರಾನ್ಸಾಕ್ಷನ್ ಅಪ್ಪರ್ ಲಿಮಿಟ್ ಬಗ್ಗೆ ಮೊದಲೇ ಸೂಚನೆ ನೀಡಿದೆ. ಅವು ತಮ್ಮ ಸಿಸ್ಟಮ್‌ಗಳನ್ನು ನೂತನ ನಿಯಮಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಸೂಚನೆ ಕೊಡಲಾಗಿದೆ. ಹೊಸ ಫೀಚರ್ ಲಭ್ಯವಿರುವ ಬಗ್ಗೆ app ಬಳಕೆದಾರರು ಇಂದೇ ಖಚಿತಪಡಿಸಿಕೊಳ್ಳಬಹುದು.