UPI ಬಳಕೆದಾರರಿಗೆ ಶಾಕಿಂ’ಗ್ ನ್ಯೂಸ್.! ಇನ್ಮುಂದೆ ಡಿಜಿಟಲ್ ಪಾವತಿಗೆ ಶೇಕಡ 18%- GST ಟ್ಯಾಕ್ಸ್ ಕಡ್ಡಾಯ.!

UPI Payment

ಭಾರತವು ಡಿಜಿಟಲೀಕರಣದತ್ತ (Digital India) ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಉಳಿದ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಜನರು ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking sector) ಇದಕ್ಕೆ ಬಹಳ ವೇಗವಾಗಿ ಹೊಂದುಕೊಂಡಿದ್ದಾರೆ ಎಂಬುದನ್ನು ಒಪ್ಪಬಹುದು. ಇಂದು ಸಾಮಾನ್ಯ ರಸ್ತೆ ಬದಿ ತರಕಾರಿ ವ್ಯಾಪಾರಿ ಕೂಡ QR ಸ್ಕ್ಯಾನರ್ ಇಟ್ಟುಕೊಂಡು ಆನ್ಲೈನಲ್ಲಿ ಹಣ ಸ್ವೀಕರಿಸುವ ವಹಿವಾಟು ನಡೆಸುವುದನ್ನು ಸಲೀಸಾಗಿ ಕಲಿತಿರುವುದೇ ಇದಕ್ಕೆ ಸಾಕ್ಷಿ.

ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರು (PM Narendra Modi) 2016ರಲ್ಲಿ ಕೈಗೊಂಡಂತಹ ರೂ.1000 ಮತ್ತು ರೂ.500 ಮುಖಬೆಲೆಯ ಹಳೆಯ ನೋಟ್ ಅಮಾನ್ಯೀಕರಣ (Note demonitization) ಸಂದರ್ಭದಲ್ಲಿ ಉಂಟಾದ ಸಂಧಿಗ್ಧ‌ ಪರಿಸ್ಥಿತಿಯೂ ಹಾಗೆಯೇ ಕರೋನಾ (Corona) ಸಾಂಕ್ರಾಮಿಕ ಸಮಯದಲ್ಲಿ ಹೈಜನಿಕ್ ಹೆಸರಿನಲ್ಲಿ ಕಲಿತ ಪಾಠವೋ‌.

WhatsApp Group Join Now
Telegram Group Join Now

ಒಟ್ಟಾರೆ ಪರಿಣಾಮವಾಗಿ ನಾವೀಗ ಲೆಸ್ ಕ್ಯಾಶ್ (Less Cash) ಕಾನ್ಸೆಪ್ಟ್ ಗೆ ಬಹಳ ಹೊಂದಿಕೊಂಡಿದ್ದೇವೆ. ಭಾರತ ಸರ್ಕಾರವು ಕೂಡ ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವುದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಬಹಳ ಭಿನ್ನ ರೂಪ ಪಡೆದುಕೊಂಡು ವೈರಲ್ ಆಗುತ್ತಿದೆ ಜನಸಾಮಾನ್ಯರು ಈ ಬಗ್ಗೆ ಹೆಚ್ಚಿನ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿ:- BSF Recruitment: ನಲ್ಲಿ ಉದ್ಯೋಗವಕಾಶ, 15654 ಹುದ್ದೆಗಳ ನೇಮಕಾತಿ.!

ಮುಂಬರುವ GST ಕೌನ್ಸಿಲ್ ಸಭೆಯಲ್ಲಿ ರೂಂ.2000 ಗಿಂತ ಕಡಿಮೆ ಮೊತ್ತದ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮತ್ತು ಯಾವುದೇ UPI ಆಧಾರಿತ ಡಿಜಿಟಲ್ ಪ್ರಾವತಿಗಳ ಮೇಲೆ ಕೇಂದ್ರ ಸರ್ಕಾರವು 18% GST ವಿಧಿಸಲು ಮುಂದಾಗಿದೆ ಎನ್ನುವ ಸುದ್ದಿಯು ಬಳಕೆದಾರರ ಕಳವಳಕ್ಕೆ ಕಾರಣವಾಗಿದೆ.

ಆದರೆ ಸಮಾಧಾನಕರ ಸಂಗತಿ ಏನೆಂದರೆ ಈ ವಿಚಾರ ಸಂಪೂರ್ಣ ಸತ್ಯವಲ್ಲ ಭಾರತ ಸರ್ಕಾರವು ಡಿಜಿಟಲ್ ಕ್ರಮವನ್ನು ಉತ್ತೇಜಿಸುವ ಸಲುವಾಗಿಯೇ ಮತ್ತು ಕ್ರೆಡಿಟ್ ಡೆಬಿಟ್ ಮತ್ತು UPI ಬೆಂಬಲಿತ ವಹಿವಾಟುಗಳ ಮೇಲೆ ಸೇವಾ ತೆರಿಗೆಯನ್ನು ತೆಗೆದು ಹಾಕಿದೆ.

ಆದರೆ ಈಗ ಎಬ್ಬಿರುವ ಕೋಲಹಲಕ್ಕೆ ಅರ್ಥವಿಲ್ಲ. ಯಾಕೆಂದರೆ ಎಲ್ಲರಿಗೂ ತಿಳಿದಿರುವಂತೆ 2017ರಲ್ಲಿ ವ್ಯಾಟ್ ಬದಲಾಗಿ GST ಪರಿಚಯಿಸಿತು. ಹಾಗೆಯೇ ಆಗಾಗ ಜಿಎಸ್​ಟಿ ಕೌನ್ಸಿಲ್ ಸಭೆ ಕೂಡ ನಡೆಯುತ್ತದೆ ಇಲ್ಲಿ ದೇಶದ ಆರ್ಥಿಕ ಸ್ಥಿತಿ-ಗತಿಗಳಿಗೆ ಅನುಗುಣವಾಗಿ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಈ ಸುದ್ದಿ ಓದಿ:- Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತೊಮ್ಮೆ ಅವಕಾಶ.!

ಆ ಪ್ರಕಾರವಾಗಿ ಈಗ ಸಭೆಗೆ ಬಂದಿರುವ ಸಲಹೆ ಏನೆಂದರೆ ಪಾವತಿ ಗೇಟ್ ವೆಟ್ ಸೈಟ್ ಗಳಾದ ರೇಜಾರ್ ಪೇ, ಅಮೇಜಾನ್ ಪೇ ಮತ್ತು ಜೆಸ್ ಪೇ ಮೇಲೆ ಹೊಸ GST ವಿಧಿಸುವಂತೆ ಸೂಚನೆ ಕೊಡಲಾಗಿದೆ. ಆದರೆ ಸಾಮಾನ್ಯ ಜನರ ವಹಿವಾಟಿನ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಉಂಟು ಮಾಡುವುದಿಲ್ಲ ನೇರವಾಗಿ ಇದು ವ್ಯಾಪಾರಿಗೆ ಪ್ರತಿವಹಿವಾಟಿಗೆ 0.5%-2% ವ್ಯಾಪಾರಿಗಳಿಗೆ ತೆರಿಗೆ ವಿಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ.

ಇದೊಂದು ವ್ಯಾಪಾರಿ ಪರೋಕ್ಷ ತೆರಿಗೆ ಎಂದು ಕೂಡ ಹೇಳಲಾಗುತ್ತಿದೆ. ದೇಶದಲ್ಲಿನ ಪಾವತಿ ಗೇಟ್ ವೆಟ್ ವ್ಯಾಪಾರಿಗಳು ಈವರೆಗೂ ರೂ.1000 ವಹಿವಾಟಿನ ಮೇಲೆ ವ್ಯಾಪಾರಿಯಿಂದ ರೂ.100 ಟ್ಯಾಕ್ಸ್ ವಸೂಲಿ ಮಾಡುತ್ತಿತ್ತು ಆದರೆ ಈ ಹೊಸ 18% GST ನಿಯಮ ಅನ್ವಯಿಸಿದರೆ.

ಅದು ಪ್ರತಿ ರೂಂ.1000 ವಹಿವಾಟಿಗೆ ರೂ.11.80 ತೆರಿಗೆ ಪಾವತಿಸಿದಂತಾಗುತ್ತದೆ ಹಾಗಾಗಿ ಇದು ಅನುಕೂಲಕರ ಎಂದು ಹೇಳಲಾಗುತ್ತಿದೆ. ಆದರೆ ಸಣ್ಣ ವ್ಯಾಪಾರಿಗಳಿಗೆ ಇದರಿಂದ ನ’ಷ್ಟವಾಗುತ್ತದೆ ಎನ್ನುವ ವಾದವು ಕೂಡ ಇದೆ. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿ ಸರ್ಕಾರ ಯಾವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಾವು ಕೂಡ ಕಾದು ನೋಡೋಣ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment