KVB Jobs:
ನೀವೇನಾದರೂ ನಿರುದ್ಯೋಗಿಗಳಾಗಿದ್ದರೆ ಅಥವಾ ಬ್ಯಾಂಕಿಂಗ್ ಹುದ್ದೆಗಳ ಬಗ್ಗೆ ಆಸಕ್ತಿ ಇದ್ದು ಈ ನೌಕರಿಗೆ ಬದಲಾಗಲು ಚಿಂತಿಸುತ್ತಿದ್ದರೆ ನಿಮಗೆ ಅನುಕೂಲಕರವಾಗುವಂತಹ ಮಾಹಿತಿಯೊಂದನ್ನು ಇಂದು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ಅದೇನೆಂದರೆ, ಭಾರತದಾದ್ಯಂತ ಸಾವಿರಾರು ಸಂಖ್ಯೆಗಳಲ್ಲಿ ಬ್ರಾಂಚ್ ಹೊಂದಿರುವ ಕರೂರು ವೈಶ್ಯ ಬ್ಯಾಂಕ್ (KVB Recruitment), ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ.
ಈ ಸುದ್ದಿ ಓದಿ:- Post office: ಪೋಸ್ಟ್ ಆಫೀಸ್ ನಲ್ಲಿ 500 ರೂಪಾಯಿ ಕಟ್ಟಿ ಸಾಕು 35,000 ಸಿಗಲಿದೆ.!
ಈ ಸಂಬಂಧ ಸಂಪೂರ್ಣ ಮಾಹಿತಿಯುಳ್ಳ ಪ್ರಕಟಣೆಯನ್ನು ಕೂಡ ಹೊರಡಿಸಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ನೇಮಕಾತಿ ಕುರಿತ ಪ್ರಮುಖ ಸಂಗತಿಗಳ ಬಗ್ಗೆ ಮಾಹಿತಿ ತಿಳಿಸುತ್ತೇವೆ, ತಪ್ಪದೇ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಉದ್ಯೋಗ ಸಂಸ್ಥೆ:- ಕರೂರು ವೈಶ್ಯ ಬ್ಯಾಂಕ್ (KVB)
ಹುದ್ದೆ ಹೆಸರು:- ಬ್ರಾಂಚ್ ಸೇಲ್ಸ್ ಆಂಡ್ ಸರ್ವಿಸ್ ಮ್ಯಾನೇಜರ್ ಹುದ್ದೆಗಳು
ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದಲ್ಲಿರುವ ಕರೂರು ವೈಶ್ಯ ಬ್ಯಾಂಕ್ ನ ಯಾವುದೇ ಬ್ರಾಂಚ್ ನಲ್ಲಿ ಉದ್ಯೋಗ ಮಾಡಲು ತಯಾರಿರಬೇಕು
ವೇತನ ಶ್ರೇಣಿ:-
ಹುದ್ದೆಗಳಿಗೆ ಅನುಸಾರವಾಗಿ ಮಾಸಿಕವಾಗಿ ಅತ್ಯುತ್ತಮ ವೇತನ ಶ್ರೇಣಿ ಹಾಗೂ ಇತರೆ ಸೌಲಭ್ಯಗಳು ಕೂಡ ಸಿಗುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
ಭಾರತದಲ್ಲಿ ಮಾನ್ಯತೆ ಪಡೆದಿರುವ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬೇಕು
* ಆಸಕ್ತ ಅಭ್ಯರ್ಥಿಗಳು ಮೊದಲಿಗೆ KVB ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ
* ಸೂಚನೆಯ ಪ್ರಕಾರವಾಗಿ ಅರ್ಜಿ ಫಾರಂ ಭರ್ತಿ ಮಾಡಿ, ಅಗತ್ಯ ಇರುವ ಪೂರಕ ದಾಖಲೆಗಳ ಸಂಖ್ಯೆಗಳನ್ನು ಲಗತ್ತಿಸಿ ಅಥವಾ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.
* ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ – https://careers.karurvysyabank.co.in
* ಕಡೆ ದಿನಾಂಕ ಮುಗಿದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ, ಸಲ್ಲಿಕೆಯಾದ ಅರ್ಜಿಗಳು ಸ್ವೀಕೃತವಾಗುವುದಿಲ್ಲ
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಬ್ಯಾಂಕ್ ನೇಮಕಾತಿ ಪ್ರಕಾರವಾಗಿ ಸ್ಕ್ರೀನಿಂಗ್ ಹಾಗೂ ಸಂದರ್ಶನ ನಡೆಸಲಾಗುತ್ತದೆ
* ಆಯ್ಕೆ ಆದವರ ಮೆರಿಟ್ ಲಿಸ್ಟ್ ತಯಾರಿಸಿ ಪ್ರಕಟಿಸಲಾಗುವುದು
* ನಂತರ ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ಕಾರ್ಯಕ್ರಮ ಕೂಡ ನಡೆಸಲಾಗುತ್ತದೆ.
ಅರ್ಜಿ ಶುಲ್ಕ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಬೇಕಾದ ಅವಶ್ಯಕತೆ ಇಲ್ಲ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 06 ಆಗಸ್ಟ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಸೆಪ್ಟೆಂಬರ್, 2024
* ಪರೀಕ್ಷೆ ನಡೆಯುವ ದಿನಾಂಕಗಳನ್ನು ಅಭ್ಯರ್ಥಿಗೆ ಮುಂಚಿತವಾಗಿ SMS ಅಥವಾ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.