Library: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.! PUC ಪಾಸ್ ಆದವರು ಅರ್ಜಿ ಹಾಕಿ.!

Library

ರಾಜ್ಯದಾದ್ಯಂತ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ, ಚಾಮರಾಜನಗರ ಜಿಲ್ಲೆಯ 5 ತಾಲೂಕಿನ ಒಟ್ಟು 15 ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು ಖಾಲಿ ಇದ್ದು ಜಿಲ್ಲಾ ಪಂಚಾಯತ್ ಕಾರ್ಯಾಲಯವು ಈ ಸಂಬಂಧ ಪ್ರಕಟಣೆ ಹೊರಡಿಸಿದೆ.

ಆ ಪ್ರಕಾರವಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಆಯ್ಕೆ ವಿಧಾನ ಹೇಗಿರುತ್ತದೆ? ಅರ್ಜಿ ಶುಲ್ಕ ಎಷ್ಟು? ಕಡೆಯ ದಿನಾಂಕ ಹೇಗೆ ಇತ್ಯಾದಿ ವಿವರ ಹೀಗಿದೆ.

WhatsApp Group Join Now
Telegram Group Join Now

ನೇಮಕಾತಿ ಸಂಸ್ಥೆ:- ಜಿಲ್ಲಾ ಪಂಚಾಯಿತಿ, ಚಾಮರಾಜನಗರ
ಹುದ್ದೆ ಹೆಸರು:- ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 15 ಹುದ್ದೆಗಳು

ಈ ಸುದ್ದಿ ಓದಿ:- Jio Sim: ಜಿಯೋ ಸಿಮ್ ಬಳಕೆದಾರರಿಗೆ ಸಿಹಿ ಸುದ್ದಿ.! ಅತಿ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಲಾಂಚ್

ಉದ್ಯೋಗ ಸ್ಥಳ:-
1. ಹನೂರು ತಾಲ್ಲೂಕು – ಬೈಲೂರು, ದೊಡ್ಡಲತ್ತೂರು, ಮೀಣ್ಯಂ, ಶೆಟ್ಟಳ್ಳಿ
2. ಕೊಳ್ಳೇಗಾಲ ತಾಲ್ಲೂಕು – ಸಿದ್ದಯ್ಯನಪುರ, ತಿಮ್ಮರಾಜಿಪುರ
3. ಗುಂಡ್ಲುಪೇಟೆ ತಾಲ್ಲೂಕು – ಕೂತನೂರು, ಮೂಖಹಳ್ಳಿ, ಪುತ್ತನಪುರ, ವಡ್ಡಗೆರೆ, ಬೊಮ್ಮನಹಳ್ಳಿ, ಅಗತಗೌಡನಹಳ್ಳಿ
4. ಯಳಂದೂರು ತಾಲ್ಲೂಕು – ಬಿಳಿಗಿರಿರಂಗನ ಬೆಟ್ಟ
5. ಚಾಮರಾಜನಗರ ತಾಲ್ಲೂಕು – ಗೋವಿಂದವಾಡಿ, ಹೊನ್ನಹಳ್ಳಿ

ವೇತನ ಶ್ರೇಣಿ:-
ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸಿರುವ ಗೌರವ ಸಂಭಾವನೆಗೆ ಅರ್ಹರಾಗಿರುತ್ತಾರೆ

ಅರ್ಹತಾ ಮಾನದಂಡ:

1. ಶೈಕ್ಷಣಿಕ ಅರ್ಹತೆಗಳು:-
* ದ್ವಿತೀಯ PUC ಉತ್ತೀರ್ಣರಾಗಿರಬೇಕು
* ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಉತ್ತೀರ್ಣರಾಗಿ ಪ್ರಮಾಣ ಪತ್ರ ಪಡೆದಿರಬೇಕು
* 3 ತಿಂಗಳ ಕಂಪ್ಯೂಟರ್ ಶಿಕ್ಷಣ ಪ್ರಮಾಣ ಪತ್ರ ಪಡೆದಿರಬೇಕು

2. ವಯೋಮಿತಿ ಮಾನದಂಡ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ 40 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು
* ಕರ್ನಾಟಕ ನಾಗರೀಕ ಸೇವೆಗಳು ನಿಯಮ 1977ರ ಅಡಿ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ.
3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರಬೇಕು ಎನ್ನುವ ನಿಯಮ ಇದೆ.

ಈ ಸುದ್ದಿ ಓದಿ:- 5 Rupees Note: ಈ ರೀತಿ 5 ರೂಪಾಯಿ ನೋಟು ಇದ್ದರೆ ಲಕ್ಷಧಿಪತಿಗಳಾಗೋದು ಗ್ಯಾರಂಟಿ.!

ಅರ್ಜಿ ಶುಲ್ಕ:-

* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1 ರ ಅಭ್ಯರ್ಥಿಗಳಿಗೆ ರೂ.50
* OBC ವರ್ಗದ ಅಭ್ಯರ್ಥಿಗಳಿಗೆ ರೂ.100
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200
* ಅರ್ಜಿ ಶುಲ್ಕವನ್ನು ಈ ಕೆಳಕಂಡ ಖಾತೆಗೆ ಪಾವತಿಸಿ ಅರ್ಜಿ ಸಲ್ಲಿಸುವ ವೇಳೆ ದಾಖಲೆಯಾಗಿ ಚಲನ್ ಕಾಪಿಯನ್ನು ಕೂಡ ಸಲ್ಲಿಸಬೇಕು.
Name – Chief executive Office,Zilla Panchayath, Chamarajnagara
Account No. –
17062170000015
IFSC Code – CNRB0000797
Branch – Chamarajnagara

ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* chamarajnagar.nic.in ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು

ಆಯ್ಕೆ ವಿಧಾನ:-
* ಅಭ್ಯರ್ಥಿಗಳಿಗೆ ನಿಗಧಿ ಪಡಿಸಿರುವ ವಿದ್ಯಾರ್ಹತೆಯ ಆಧಾರದ ಮೇಲೆ ಗರಿಷ್ಠ ಅಂಕ ಗಳಿಸಿದವರ ಮೆರಿಟ್ ಲಿಸ್ಟ್ ತಯಾರಿಸಿ ದಾಖಲೆಗಳ ಪರಿಶೀಲನೆ ಮತ್ತು ನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 13-09-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 12-10-2024.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment