Loan
ಜೀವನದಲ್ಲಿ ಒಂದು ಹಂತಕ್ಕೆ ವಿದ್ಯಾಭ್ಯಾಸ ಮುಗಿದ ನಂತರ ಕುಟುಂಬದ ಪರಿಸ್ಥಿತಿಗಾಗಿ ಕಾಂಪ್ರಮೈಸ್ ಆಗಿ ಯಾವುದೋ ಒಂದು ಸಿಕ್ಕ ಉದ್ಯೋಗ ಮಾಡುವವರು ಒಂದು ಕಡೆಯಾದರೆ, ಎಷ್ಟೇ ವರ್ಷ ಆದರೂ ಇಂತಹದ್ದೇ ಕೆಲಸಕ್ಕೆ ಹೋಗಬೇಕು ಎಂದು ವರ್ಷಗಟ್ಟಲೆ ಕಾದು ಪ್ರಯತ್ನಿಸಿ ಆ ಹುದ್ದೆ ಏರುವವರ ಸಂಖ್ಯೆ ಮತ್ತೊಂದೆಡೆ ಇದೆ.
ಇದೆಲ್ಲದರ ನಡುವೆ ಉದ್ಯೋಗಕ್ಕಿಂತ ಉದ್ಯಮದ ಬಗ್ಗೆ ಆಸಕ್ತಿ ಹೊಂದಿರುವವರ ಸಂಖ್ಯೆ ಈಗಿನ ಕಾಲದಲ್ಲಿ ಹೆಚ್ಚಾಗಿಯೇ ಇದೆ. ಇದಕ್ಕೆ ಪೂರಕವಾಗಿ ಈಗ ಬೃಹತ್ ಅವಕಾಶಗಳು ಕೂಡ ಸಿಗುತ್ತಿದೆ. ಕಡಿಮೆ ವಿದ್ಯಾಭ್ಯಾಸ ಮಾಡಿದ್ದರೂ ಕೂಡ ಕೈ ತುಂಬಾ ಬಿಸಿನೆಸ್ ಮೂಲಕ ಹಣ ಗಳಿಸುವ ಮಾರ್ಗಗಳು ಇದೆ.
ಇದಕ್ಕೆ ಆರಂಭಿಕ ಬಂಡವಾಳವಾಗಿ ಬಂಡವಾಳದ ಕೊರತೆ ಎದುರಿಸುತ್ತಿರುವ ಕೆಲವು ವರ್ಗಕ್ಕೆ ಸರ್ಕಾರದಿಂದ ಸಹಾಯ ಹಸ್ತ ಕೂಡ ದೊರಕುತ್ತಿದೆ. ಇಂತಹದೇ ಒಂದು ವಿಶೇಷ ಯೋಜನೆಗೆ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ, ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಆಸಕ್ತರು ಈ ಯೋಜನೆ ಕುರಿತ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
ಯೋಜನೆಯ ಉದ್ದೇಶ:- ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನಿರುದ್ಯೋಗಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಕಿರು ಉದ್ಯಮ ಸ್ಥಾಪನೆಗೆ 50% ಸಬ್ಸಿಡಿಯೊಂದಿಗೆ ರೂ.1ಲಕ್ಷ ದವರೆಗೆ ಸಾಲ ಸೌಲಭ್ಯ ಒದಗಿಸುವುದು.
ಅರ್ಹತೆಗಳು:-
* ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
* ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು
* ಕನಿಷ್ಠ 18 ವರ್ಷದಿಂದ ಗರಿಷ್ಠ 55 ವರ್ಷದ ಒಳಗಿರಬೇಕು
* ಈಗಾಗಲೇ ಈ ಯೋಜನೆಯಡಿ ಪ್ರಯೋಜನ ಪಡೆದಿದ್ದರೆ, ಅಥವಾ ಕುಟುಂಬದ ಯಾವುದೇ ವ್ಯಕ್ತಿ ಈಗಾಗಲೇ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದಿದ್ದರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
* ಯೋಜನೆಗೆ ಕೇಳಲಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕು
ಸಹಾಯಧನದ ಮೊತ್ತ:- ಒಟ್ಟು ರೂ.1 ಲಕ್ಷ ಸಾಲ
* ರೂ.50,000 ಸಹಾಯಧನ
* ರೂ.50,000 ಸಾಲಸೌಲಭ್ಯ (ಶೇ. 4% ಬಡ್ಡಿದರದ ಅನ್ವಯ)
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು ಈ ಯೋಜನೆಗೆ ಬೇಕಾದ ಎಲ್ಲಾ ಪೂರಕ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ಕೊಟ್ಟು ಈ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ ಕೂಡ ನೇರವಾಗಿ ಅರ್ಜಿ ಸಲ್ಲಿಸಬಹುದು, ಮತ್ತು ವಿನಂತಿ ಸಂಖ್ಯೆಯ ಮೂಲಕ ಅರ್ಜಿ ಸ್ಟೇಟಸ್ ಟ್ರ್ಯಾಕ್ ಮಾಡಬಹುದು
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್ ಪ್ರತಿ
* ಪಾನ್ ಕಾರ್ಡ್ ಪ್ರತಿ
* ರೇಷನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ
* ಯೋಜನಾ ಘಟಕದ ವಿವರ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23 ಅಕ್ಟೋಬರ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ನವೆಂಬರ್, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಸರ್ಕಾರದ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.
* ದೂರವಾಣಿ ಸಂಖ್ಯೆ – 9482 300 400